ಸಿರಿಯಾದಲ್ಲಿ ಅವಳಿ ಬಾಂಬ್ ಸ್ಪೋಟ, 13 ಯೋಧರು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಡಮಾಸ್ಕಸ್,ಅ.20-ಸಿರಿಯಾ ರಾಜಧಾನಿ ಡಮಾಸ್ಕಸ್‍ನ ರಸ್ತೆ ಬದಿ ಹುದುಗಿಸಿಟ್ಟಿದ್ದ ಎರಡು ಬಾಂಬ್‍ಗಳು ಸ್ಪೋಟಿಸಿ ಮಿಲಿಟರಿ ಬಸ್‍ನಲ್ಲಿ ಸಂಚರಿಸುತ್ತಿದ್ದ 13 ಯೋಧರು ಮೃತಪಟ್ಟು ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಪೀಕ್ ಅವರ್‍ನಲ್ಲೆ ದುಷ್ಕರ್ಮಿಗಳು ಮಿಲಿಟರಿ ಬಸ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ.

ಸಿರಿಯಾದಲ್ಲಿ ಇಂತಹ ದಾಳಿ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ. ಘಟನೆಯಲ್ಲಿ 13 ಮಂದಿ ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿತರ ಹಲವಾರು ಯೋಧರು ತೀವ್ರವಾಗಿ ಗಾಯಗೊಂಡಿರುವುದರಿಂದ ಸಾವು-ನೋವು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸಿರಿಯಾದಲ್ಲಿ ಕಳೆದ 2011 ರಿಂದ ಭೀಕರ ಕೃತ್ಯಗಳು ಸಂಭವಿಸುತ್ತಿವೆ. ಇದುವರೆಗೂ ಉಗ್ರರ ಕೃತ್ಯಕ್ಕೆ ಮೂರುವರೆ ಲಕ್ಷ ಮಂದಿ ಬಲಿಯಾಗಿದ್ದಾರೆ. ದೇಶದ ಅರ್ಧದಷ್ಟು ಜನಸಂಖ್ಯೆ ದೇಶದಿಂದ ಪಲಾಯನ ಮಾಡಿದ್ದಾರೆ.

ಒಂದು ಅಂದಾಜಿನ ಪ್ರಕಾರ ಐದು ಮಿಲಿಯನ್‍ಗೂ ಹೆಚ್ಚು ಸಿರಿಯನ್ನರು ವಿದೇಶಗಳಲ್ಲಿ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ.
ಇಂತಹ ಸಿರಿಯಾದಲ್ಲಿ ಇತ್ತೀಚೆಗೆ ಬಾಂಬ್ ದಾಳಿ ನಡೆದಿರಲಿಲ್ಲ. ಇದೀಗ ಮತ್ತೆ ಸೇನಾ ಯೋಧರನ್ನು ಗುರಿಯಾಗಿರಿಸಿಕೊಂಡು ಬಾಂಬ್ ದಾಳಿ ನಡೆದಿರುವುದರಿಂದ ಭವಿಷ್ಯದಲ್ಲಿ ಸಿರಿಯಾದಲ್ಲಿ ಮತ್ತಷ್ಟು ದಾಳಿ ನಡೆಸುವ ಸೂಚನೆ ಎಂದು ಪರಿಗಣಿಸಲಾಗುತ್ತಿದೆ.

Facebook Comments