NLFT ತೀವ್ರಗಾಮಿಗಳ ದಾಳಿಯಲ್ಲಿ ಇಬ್ಬರು BSF ಯೋಧರು ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

ತ್ರಿಪುರ, ಆ.3- ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ (ಎನ್‍ಎಲ್‍ಎಫ್‍ಟಿ) ಸಂಘಟನೆಯ ತೀವ್ರಗಾಮಿಗಳು ದಾಳಿ ನಡೆಸಿ ಇಬ್ಬರು ಬಿಎಸ್‍ಎಫ್ ಯೋಧರನ್ನು ಹತ್ಯೆ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಎನ್‍ಎಲ್‍ಎಫ್‍ಟಿ ಉಗ್ರರು ಹೊಂಚು ಹಾಕಿ ದುಷ್ಕøತ್ಯ ನಡೆಸಿದ್ದಾರೆ.

ಧಲೈ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಬಿಎಸ್‍ಎಫ್‍ನ ಸಬ್ ಇನ್ಸ್‍ಪೆಕ್ಟರ್ ಸೇರಿದಂತೆ ಇಬ್ಬರು ಯೋಧರ ಬಲಿದಾನವಾಗಿದೆ. ನಿಷೇಧಿತ ಸಂಘಟನೆಯಾಗಿರುವ ಎನ್‍ಎಲ್‍ಎಫ್‍ನ ದುಷ್ಕøತ್ಯಕ್ಕೆ ವ್ಯಾಪಕ ಆಕ್ರೋಶಗಳು ಕೇಳಿ ಬಂದಿತ್ತು, ತಕ್ಕ ಪಾಠ ಕಲಿಸುವ ಮಾತುಗಳು ಕೇಳಿ ಬಂದಿವೆ.

Facebook Comments