ಭಯೋತ್ಪಾದಕ ಸಹಚರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ನ.21- ಜೈಷ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಸಂಪರ್ಕ ಹೊಂದಿರುವ ಇಬ್ಬರು ಭಯೋತ್ಪಾದಕ ಸಹಚರರನ್ನು ಜಮ್ಮುಕಾಶ್ಮೀರದ ಅವಾಂತಿvರ ಠಾಣೆ ಪೊಲೀಸರು ಬಂಸಿದ್ದಾರೆ.  ವಾಗದ್‍ತ್ರಾಲ್ ಮೂಲದ ಬಿಲಾಲ್ ಅಹ್ಮದ್ ಚೋಪನ್ ಮತ್ತು ಚಟ್ಲಮ್ ಪಂಪೋರ್ ಪ್ರದೇಶದ ಮುರ್ಸಾಲೀನ ಬಶೀರ್ ಶೇಖ್ ಬಂತ ಭಯೋತ್ಪಾದಕ ಸಹಚರರು.

ಈ ಇಬ್ಬರು ಭಯೋತ್ಪಾದಕ ಚಟುವಟಿಕೆಗಳಿಗೆ ನೆರವಾಗುತ್ತಿದ್ದು, ಉಗ್ರರಿಗೆ ಉಳಿದುಕೊಳ್ಳಲು ಪಂಪೋರ್ ಮತ್ತು ತ್ರಾಲ್ ಪ್ರದೇಶದಲ್ಲಿ ಆಶ್ರಯ ನೀಡಿದ್ದರು. ಅಲ್ಲದೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಉಗ್ರರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಸಹಾಯ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳ ವಿರುದ್ಧ ಪೊಲೀಸ್ ಠಾಣೆ ತ್ರಾಲ್ ಮತ್ತುಪೋಲೀಸ್ ಠಾಣೆ ಪಂಪೋರ್‍ನಲ್ಲಿ ಕಾನೂನಿನ ಸಂಬಂತ ವಿಭಾಗಗಳಡಿ ಎಫ್‍ಐಆರ್ ದಾಖಲಿಸಲಾಗಿದೆ.

Facebook Comments