ಪ್ರಯಾಣಿಕರನ್ನು ದೋಚುತ್ತಿದ್ದ ಖದೀಮರನ್ನು ಹಿಡಿದು ಗುಮ್ಮಿದ ಕುರಿಗಾಹಿಗಳು…!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಬೈಕ್ ಸವಾರನನ್ನ ಅಡ್ಡಗಟ್ಟಿ ಹಣ ಮತ್ತು ಚಿನ್ನಾಭರಣ ದೋಚಲು ಪ್ರಯತ್ನಿಸಿದವರನ್ನು ಕುರಿಗಾಹಿಗಳು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹೊಳೆನರಸಿಪುರ ತಾಲೂಕಿನ ಕಬ್ಬೂರು ಬಳಿ ನಡೆದಿದೆ.

ಹೊಳೆನರಸಿಪುರದ ಸಮೀಪ ವಿಷಕಂಠಯ್ಯ ಎಂಬುವರನ್ನು ಅಡ್ಡಗಟ್ಟಿ ಚಿನ್ನ ಹಾಗೂ ಹಣವನ್ನು ದೋಚಲು ಈ ಖದೀಮರು ಪ್ರಯತ್ನಿಸಿದರು,
ಕಬ್ಬೂರು ಕೊಪ್ಪಲು ಗ್ರಾಮದ ಸಿದ್ದರಾಜು (41), ಅರುಣ್ ರಾಜ್ ಅರಸ್ (35) ಮತ್ತು ರಘು (33) ಆರೋಪಿಗಳು ಎಂದು ತಿಳಿದುಬಂದಿದೆ.

ವಿಷಕಂಠಯ್ಯ ಮೊದಲು ಪ್ರತಿರೋಧ ಒಡ್ಡಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ವಾಹನವನ್ನು ಕಂಡ ಚಾಲಾಕಿಗಳು ಅವರನ್ನು ಸಮೀಪದ ಕುರುಚಲು ಗಿಡದ ಬಳಿ ಎಳೆದೊಯ್ದಿದ್ದರು.

ವಿಷಕಂಠಯ್ಯ ಮೂವರಿಂದ ಹಲ್ಲೆಗೊಳಗಾದ್ದರಿಂದ ಜೋರಾಗಿ ಕಿರುಚಾಡಿದ್ದಾರೆ ಈ ವೇಳೆ ಸಮೀಪದಲ್ಲಿದ್ದ ಕುರಿಗಾಯಿಗಳು ಸ್ಥಳಕ್ಕೆ ಆಗಮಿಸಿ ಮೂವರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ತಕ್ಕ ಶಾಸ್ತಿ ಮಾಡಿದ್ದಾರೆ.

ನಂತರ ಹೊಳೆನರಸಿಪುರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆಲ ದಿನದ ಹಿಂದೆ ಇದೇ ರೀತಿಯ ಕೃತ್ಯಕ್ಕೆ ಇಳಿದಾಗ ಸಿಕ್ಕಿ ಬಿದ್ದ ಚೋರರು ಸಾರಿಗೆ ಬಸ್ ಕಂಡಕ್ಷರ್ ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದರು ಸದ್ಯ ಈ ಮೂವರು ಹೊಳೆನರಸಿಪುರ ಪೊಲೀಸರ ವಶದಲ್ಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin