ಚೀನಾದಲ್ಲಿ ‘ಲೆಖಿಮಾ’ ರೌದ್ರಾವತಾರಕ್ಕೆ ಸತ್ತವರ ನಂಖ್ಯೆ 71ಕ್ಕೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಆ.13- ಪೂರ್ವ ಚೀನಾ, ಕರಾವಳಿ ಪ್ರದೇಶದ ಮೇಲೆ ಬಂದಪ್ಪಳಿಸಿದ ವಿನಾಶಕಾರಿ ಲೆಖಿಮಾ ಚಂಡಮಾರುತದ ರೌದ್ರಾವತಾರಕ್ಕೆ ಈವರೆಗೆ 71 ಮಂದಿ ಬಲಿಯಾಗಿದ್ದಾರೆ. ಈವರೆಗೆ 50ಕ್ಕೂ ಹೆಚ್ಚು ಶವಗಳನ್ನು ಗುರುತಿಸಲಾಗಿದ್ದು, ನಾಪತ್ತೆಯಾಗಿರುವವರನ್ನು ಮೃತಪಟ್ಟಿದ್ದಾರೆ ಎಂದು ಪರಿಗಣಿಸಲಾಗಿದೆ.

ಭಾರೀ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಅನೇಕರು ಗಾಯಗೊಂಡಿದ್ದು , ಕೆಲವರು ಕಣ್ಮರೆಯಾಗಿದ್ದಾರೆ.ಶನಿವಾರ ಬೆಳಗ್ಗೆ ಜಿಯಾಜಿಯುಂಗ್, ಷಾಂನ್‍ಡಾಂಗ್ ಮತ್ತು ಹನ್‍ಉಯಿ ಪ್ರಾಂತ್ಯಗಳ ಮೇಲೆ ಲೆಖಿಮಾ ಚಂಡಮಾರುತ ಎರಗಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಸಾವು-ನೋವಿಗೆ ಕಾರಣವಾಯಿತು.

ಈ ಮೂರು ಪ್ರಾಂತ್ಯಗಳಲ್ಲಿ ಸಹಸ್ರಾರು ಜನ ಚಂಡಮಾರುತದ ಪ್ರಕೋಪಕ್ಕೆ ಎದುರಿ ಪಲಾಯನರಾಗಿದ್ದಾರೆ. ಭಾರೀ ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆಯಿಂದಾಗಿ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿದ್ದು , ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾರೀ ಮಳೆಯೊಂದಿಗೆ ಕರಾವಳಿ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ತಲೆದೋರಿದ್ದು , ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರಚಂಡ ವೇಗದಲ್ಲಿ ಮುನ್ನುಗ್ಗುತ್ತಿರುವ ಬಿರುಗಾಳಿ ಈ ಮೂರು ಪ್ರಾಂತ್ಯಗಳ ಸುತ್ತಮುತ್ತಲ ಪ್ರದೇಶಗಳ ಮೇಲೂ ಆರ್ಭಟ ಮುಂದುವರೆಸಿದ್ದು, ಅಲ್ಲಿಯೂ ಸಾವು ನೋವಿನ ವರದಿಯಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.

Facebook Comments