ಗಾಂಧಿ ಕೊಡುಗೆಗಳ ಪ್ರವರ್ತನಕ್ಕಾಗಿ ಅಮೆರಿಕ ಕಾಂಗ್ರೆಸ್ ಸಮಿತಿ ಮಸೂದೆ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.30- ಮಹಾತ್ಮ ಗಾಂಧೀಜಿ ಮತ್ತು ಮಾರ್ಟಿನ್ ಕಿಂಗ್ ಲೂಥನ್ ಜೂನಿಯರ್ ಅವರು ಸಮಾಜ ಮತ್ತು ಮನುಕುಲಕ್ಕೆ ನೀಡಿರುವ ಕೊಡುಗೆಗಳನ್ನು ಪ್ರವರ್ತನಗೊಳಿಸುವ ಮಸೂದೆಗೆ ಅಮೆರಿಕ ಕಾಂಗ್ರೆಸ್ ಸಮಿತಿ ಅನುಮೋದನೆ ನೀಡಿದೆ.

ನಾಗರಿಕ ಹಕ್ಕುಗಳ ಹೋರಾಟಗಾರ ಜಾನ್ ಲೆವಿಸ್ ರಚಿಸಿರುವ ಗಾಂಧಿ-ಕಿಂಗ್ ಎಕ್ಸ್‍ಚೇಂಜ್ ಆಕ್ಟ್ (ಮಹಾತ್ಮ ಗಾಂಧಿ-ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ವಿನಿಮಯ ಕಾಯ್ದೆ) ವಿಧೇಯಕಕ್ಕೆ ಭಾರತೀಯ ಮೂಲದ ಅಮೆರಕ ಕಾಂಗ್ರೆಸ್ಸಿಗರಾದ ಅಮಿ ಬೆಹ್ರಾ ಸಹ ಪ್ರಾಯೋಜಕತ್ವ ವಹಿಸಿದ್ದು, ವಿದೇಶಾಂಗ ವ್ಯವಹಾರಗಳ ಸದನ ಸಮಿತಿ ಈ ಮಸೂದೆಗೆ ಅಂಗೀಕಾರ ನೀಡಿದೆ.

ಬಾಪು ಮತ್ತು ಕಿಂಗ್ ಜೂನಿಯರ್ ಅವರು ಸಮಾಜ ಮತ್ತು ಮನುಕುಲಕ್ಕೆ ನೀಡರುವ ಕೊಡುಗೆಗಳು ಅವರ ತತ್ತ್ವ-ಚಿಂತನೆ ಮತ್ತು ಆದರ್ಶನಗ¼ ಬಗ್ಗೆ ಆಧ್ಯಯನ ನಡೆಸಲು ಭಾರತ ಮತ್ತು ಅಮೆರಿಕ ನಡುವೆ ವಿನಿಮಯಕ್ಕೆ ಈ ಮಸೂದೆ ನೆರವಾಗಲಿದೆ.

ಗಾಂಧಿ ಅವರ ಸತ್ಯ ಮತ್ತು ಅಹಿಂಸೆ ತತ್ತ್ವಗಳು ಹಾಘೂ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ವರ್ಣಭೇದ ನೀತಿ ವಿರುದ್ದದ ಹೋರಾಟದ ಬಗ್ಗೆ ಈ ವಿಧೇಯಕ ಬೆಳಕು ಚೆಲ್ಲಲಿದೆ.

Facebook Comments

Sri Raghav

Admin