ಅಮೇರಿಕಾದಲ್ಲಿ ಕೊರೋನಾ ಅಟ್ಟಹಾಸ, 90,110ಕ್ಕೇರಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಮೇ 17- ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 90,110 ದಾಟಿದೆ. ನಾಳೆ ವೇಳಗೆ ಒಂದು ಲಕ್ಷ ಮಂದಿ ಅಸುನೀಗುವ ಆತಂಕವಿದೆ.

ಮಹಾಶಕ್ತಿಶಾಲಿ ರಾಷ್ಟ್ರದಲ್ಲಿ. ಈವರೆಗೆ 15,07,773 ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಇವರಲ್ಲಿ 16,250ಕ್ಕೂ ಹೆಚ್ಚು ಮಂದಿಯ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. .

ನ್ಯೂಯಾರ್ಕ್, ನ್ಯೂ ಜೆರ್ಸಿ, ಇಲಿನೋಯ್ಸ್, ಮಸ್ಸಾಚುಸೆಟ್ಸ್, ಕ್ಯಾಲಿಫೋರ್ನಿಯಾ ನಗರಗಳಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗಿದೆ. ವಿಶ್ವದಲ್ಲೇ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಅತ್ಯುತ್ತಮ ವೈದ್ಯರನ್ನು ಹೊಂದಿರುವ ಅಮೆರಿಕ ವೈರಸ್ ದಾಳಿಗೆ ಅಸಹಾಯವಾಗಿದೆ.

ವಿಜ್ಞಾನಿಗಳು ಮತ್ತು ವೈದ್ಯಕೀಯ ಸಂಶೋಧಕರು ಹೆಮ್ಮಾರಿ ನಿಗ್ರಹಕ್ಕಾಗಿ ಹಗಲು ರಾತ್ರಿ ಔಷಧಿ ಅನ್ವೇಷಣೆಯಲ್ಲಿ ತೊಡಗಿದ್ದರೂ ಈವರೆಗೆ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ.

# ಜನರಿಗೆ ಉಚಿತ ಔಷಧಿ:
ಈ ಮಧ್ಯೆ ಶ್ವೇತಭವನದಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮ್ಮ ವಿಜ್ಞಾನಿಗಳು ಕೋವಿಡ್-19 ವೈರಸ್ ನಿಗ್ರಹಕ್ಕಾಗಿ ಔಷಧಿ ಮತ್ತು ಲಸಿಕೆಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಶೀಘ್ರವೇ ಅದು ಲಭ್ಯವಾಗಲಿದೆ. ಅವುಗಳನ್ನು ಉಚಿತವಾಗಿ ಅಮೆರಿಕನ್ನರಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.

Facebook Comments

Sri Raghav

Admin