ಅಮೇರಿಕದಲ್ಲಿ ಚೀನಾ ಉತ್ಪನ್ನಗಳು ಬ್ಯಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜು.16-ಭಾರತದಂತೆ ಅಮೆರಿಕದಲ್ಲೂ ಚೀನಾ ಉತ್ಪನ್ನಗಳು ನಿಷೇಧಗೊಳ್ಳುವುದು ಖಚಿತವಾಗಿದೆ.

ಅಮೆರಿಕ ಕಾಂಗ್ರೆಸ್‍ನ 24 ಮುಖಂಡರ ನಿಯೋಗ ನಿನ್ನೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಟಿಕ್‍ಟಾಕ್ ಸೇರಿದಂತೆ ಚೀನಾ ಮೊಬೈಲ್ ಉತ್ಪನ್ನಗಳನ್ನು ನಿಷೇಧಿಸುವಂತೆ ನಿಯೋಗ ಒತ್ತಾಯಿಸಿತ್ತು.

ಈ ಮನವಿಗೆ ಸ್ಪಂದಿಸಿರುವ ಶ್ವೇತಭವನ ಒಂದು ವಾರದೊಳಗೆ ಭಾರತದಂತೆ ಚೀನಾ ಉತ್ಪನ್ನಗಳನ್ನು ನಿಷೇಧಿಸುವುದಾಗಿ ಘೋಷಿಸಿದೆ.

ಚೀನಾ ಅಪ್ಲಿಕೇಷನ್‍ಗಳಾದ ಟಿಕ್‍ಟಾಕ್, ವಿಚಾಟ್ ಮತ್ತಿತರ ಉತ್ಪನ್ನಗಳಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎದುರಾಗುವ ಸಾಧ್ಯತೆ ಇದೆ ಎಂದು ಕೆಲವು ಅಧಿಕಾರಿಗಳು ಸಲಹೆ ನೀಡಿರುವುದರಿಂದ ಚೀನಾ ಉತ್ಪನ್ನಗಳನ್ನು ನಿಷೇಧಿಸಲು ಆದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

Facebook Comments

Sri Raghav

Admin