ಪೊಲೀಸರಿಗೆ ಶರಣಾದ ಮೂವರು ಕುಖ್ಯಾತ ಉಲ್ಫಾ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ಮೇ 16-ಭಾರತ-ಮ್ಯಾನ್ಮರ್ ಗಡಿ ಮತ್ತು ಈಶಾನ್ಯ ಭಾರತದ ಕೆಲವಡೆ ನಡೆದ ವಿಧ್ವಂಸಕ ಕೃತ್ಯಗಳಲ್ಲಿ ಶಾಮೀಲಾಗಿದ್ದ ನಿಷೇಧಿತ ಉಲ್ಫಾ-1 ಉಗ್ರಗಾಮಿ ಸಂಘಟನೆಯ ಮೂವರು ಕುಖ್ಯಾತ ಬಂಡುಕೋರರು ಅಸ್ಸಾಂನ ತಿನ್‍ಸುಕಿಯಾ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ಬಬುಲ್ ಮೊರಾನ್ ಅಲಿಯಾ ಟೈಗರ್ ಅಸ್ಸೊಂ, ಬಿನಂದ ದೊಹುಟಿಯಾ ಅಲಿಯಾಸ್ ಸ್ವದೇಶ್ ಅಸ್ಸೊಂ ಮತ್ತು ಚಂದ್ರಕಾಂತ್ ಬೊರ್ಗೋಹೈನ್ ಅಲಿಯಾಸ್ ಟಿಪಾಂಗ್ ಅಸ್ಸೊಂ ಶರಣಾದ ಕುಖ್ಯಾತ ನಕ್ಸಲರು.

ಇವರು ತಮ್ಮ ಬಳಿ ಇದ್ದ ಎಕೆ-47, ಎಕೆ-56, ಎಕೆ-81, ಎಚ್‍ಕೆ-33 ರೈಫಲ್‍ಗಳು, 9 ಮ್ಯಾಗಜೈನ್‍ಗಳು, ಎರಡು ಗ್ರೇನೆಡ್‍ಗಳು, 425 ಬುಲೆಟ್‍ಗಳನ್ನು ಪೊಲೀಸರಿಗೆ ಒಪ್ಪಿಸಿ ಶರಣಾತರಾಗಿದ್ದಾರೆ ಎಂದು ಪೊಲೀಸ್ ಮಹಾ ನಿರ್ದೇಶಕ ಡಾ. ಕುಲಧರ್ ಸೈಕಿಯಾ ತಿಳಿಸಿದ್ದಾರೆ.

ಶರಣಾದವರಲ್ಲಿ ಬಬುಲ್ ಅಲಿಯಾಸ್ ಟೈಗರ್ ಅಸ್ಸೊಂ, ಅತ್ಯಂತ ಕುಖ್ಯಾತ ಉಗ್ರನಾಗಿದ್ದು, ಬರ್ಡುಮ್‍ಸಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಭಾಸ್ಕರ್ ಕಾಲಿಟಾ ಅವರನ್ನು ಹತ್ಯೆ ಮಾಡಿದ್ದ ಎಂದು ಡಿಐಜಿ ಹೇಳಿದ್ದಾರೆ.

ಇವರು ಭಾರತ-ಮ್ಯಾನ್ಮರ್ ಗಡಿ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಗಳು, ದಾಳಿಗಳು, ಉಗ್ರಗಾಮಿ ಚಟುವಟಿಕೆಗಳು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮೊದಲಾದ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ