ಕೊರೊನಾ ಭೀತಿ : ರಾಮಮಂದಿರ ಭೂಮಿಪೂಜೆಗೆ ಉಮಾ ಗೈರು

ಈ ಸುದ್ದಿಯನ್ನು ಶೇರ್ ಮಾಡಿ

ಭೋಪಾಲ್, ಆ.3-ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕಿ ಮತ್ತು ಕೇಂದ್ರದ ಮಾಜಿ ಸಚಿವ ಉಮಾ ಭಾರತಿ ಆಗಸ್ಟ್ ಐದರಂದು ಆಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ನಿರ್ಮಾಣ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ಕಾರ್ಯಕ್ರಮದ ನಂತರ ಶ್ರೀರಾಮನ ದರ್ಶನ ಪಡೆಯಲು ನಿರ್ಧರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಉಮಾಭಾರತಿ ನಾವು ಕಾರ್ಯಕ್ರಮದಿಂದ ದೂರು ಇರಲಿ ನಿರ್ಧರಿಸಿದ್ದೇನೆ. ನಾನು ಇಂದು ಭೋಪಾಲ್‍ನಿಂದ ಹೊರಡುತ್ತಿದ್ದೇನೆ. ಮಾರ್ಗಮಧ್ಯದಲ್ಲಿ ನನಗೆ ಸೋಂಕು ತಗುಲಬಹುದು.

ಆದಕಾರಣ ನಾನು ಪ್ರಧಾನಿ ಮತ್ತು ಇತರ ಗಣ್ಯರು ಪಾಲ್ಗೊಳ್ಳುವ ಕಾರ್ಯಕ್ರಮದಿಂದ ದೂರ ಇರುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ಮೋದಿ ಮತ್ತು ಇತರ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ತೆರಳಿದ ನಂತರ ನಾವು ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಉಮಾ ಭಾರತಿ ತಿಳಿಸಿದ್ದಾರೆ.

Facebook Comments

Sri Raghav

Admin