ನಟಿ ಉಮಾಶ್ರೀಯವರ ಕಾರು ಡಿಕ್ಕಿ: ಇಬ್ಬರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ನ.21- ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೊವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗದತ್ತ ಹೊರಟಿದ್ದ ಇನ್ನೊಂದು ಕಾರಿನ ನಡುವೆ ನಿನ್ನೆ ರಾತ್ರಿ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.

ಹುಬ್ಬಳ್ಳಿಯಿಂದ ಹೊರಟಿದ್ದ ಕಾರು ಚಿತ್ರನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ್ದಾಗಿದೆ. ಕಾರಿನಲ್ಲಿ ಉಮಾಶ್ರೀ ಅವರು ಇರಲಿಲ್ಲ. ಅವರನ್ನು ಬಿಟ್ಟು ಕಾರು ಚಾಲಕ ತಮ್ಮೂರಿಗೆ ಹೊರಟಿದ್ದ, ಈ ಕುರಿತು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಸಮೀಪ ಅಪಘಾತ ನಡೆದಿದ್ದು, ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬಂದ ಕಾರುಗಳ ನಡುವೆ ಡಿಕ್ಕಿಯಾಗಿದೆ. ಮೃತಪಟ್ಟವರ ಹೆಸರುಗಳು ಪತ್ತೆಯಾಗಿಲ್ಲ. ಗಾಯಗೊಂಡಿರುವ ನವಲಗುಂದದ ವೈದ್ಯಕೀಯ ಅಧಿಕಾರಿ ಸ್ಮಿತಾ ಕಟ್ಟಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Facebook Comments