ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 2 ಕೆಜಿ ರಾಗಿ, ಜೋಳ
ಬೆಂಗಳೂರು, ಫೆ.26- ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 2 ಕೆಜಿ ರಾಗಿ ಅಥವಾ ಜೋಳ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ. ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ರೇಷ್ಮೆ ಉದ್ಯಮದ ವಿಚಾರ ವಿನಿಮಯ ಮತ್ತು ನಾನು ಮತ್ತು ರೇಷ್ಮೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಉಮೇಶ್ ಕತ್ತಿ ಡಾ.ಎಸ್.ಬಿ.ದಂಡಿನ ಅವರು ಬಾಗಲಕೋಟೆ ವಿವಿಯ ಕುಲಪತಿ ಯಾಗಿದ್ದಾಗ ಅವರ ಜೊತೆ ಕೆಲಸ ಮಾಡಿರುವ ಅನುಭವ ಇದೆ.
ಅವರು ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿಯ ರೈತರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನಾನು ಮತ್ತು ರೇಷ್ಮೆ ಪುಸ್ತಕದ ಜೊತೆಗೆ ತೋಟಗಾರಿಕೆ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರು ಮತ್ತು ಸಂಶೋಧನೆಗಳನ್ನು ನಡೆಸಿದ ಅನುಭವ ಅವರಿಗಿದೆ ಎಂದು ಹೇಳಿದರು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಗಳಿಗೆ ಕೇಂದ್ರ ಸರ್ಕಾರದ ಅಕ್ಕಿ ಜೊತೆ ಸ್ಥಳೀಯ ಆಹಾರ ಉತ್ಪನ್ನವಾದ ರಾಗಿ ಮತ್ತು ಜೋಳ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ರಾಜ್ಯದಲ್ಲಿ ಸುಮಾರು 11 ಸಾವಿರ ಕುಟುಂಬಗಳು ತೋಟಗಾರಿಕೆ ಮಾಡುತ್ತಿದ್ದು ಸುಮಾರು 7000 ಕುಟುಂಬಗಳು ರೇಷ್ಮೆ ಮಗ್ಗ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಶಂಕರ್ ತಿಳಿಸಿದ್ದಾರೆ. ಸಮಾರಂಭದಲ್ಲಿ ಮಾತಾಡಿದ ಅವರು ಈ ಸಂಸ್ಥೆಯು ರೇಷ್ಮೆ ಬೆಳೆಗಳ ಉತ್ತೇಜನಕ್ಕೆ ಮತ್ತು ಮಾರುಕಟ್ಟೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರದ ಜೊತೆ ಕೆಲಸ ಮಾಡುತ್ತಿದೆ. ಇನ್ನು ಅತ್ಯಾಧುನಿಕ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ರೇಷ್ಮೆ ತೆಗೆಯಲು ಅತ್ಯಾಧುನಿಕ ಯಂತ್ರೋಪಕರಣಗಳು ಬೇಕಾಗಿ ಇರುವುದರಿಂದ ಸರ್ಕಾರ ಸಬ್ಸಿಡಿ ದರದಲ್ಲಿ ಉಪಕರಣಗಳ ಖರೀದಿಗೆ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ.
ತೋಟಗಾರಿಕೆ ಇಲಾಖೆಯಲ್ಲಿ ತರಕಾರಿ ಬೆಳೆಗಳನ್ನು ಸಂರಕ್ಷಿಸಲು ಹೆಚ್ಚಿನ ಶೀತಲೀಕರಣ ಕಟ್ಟಡಗಳು ಬೇಕಾಗಿದೆ ಮುಂದಿನ ದಿನಗಳಲ್ಲಿ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿ ಬಜೆಟ್ನಲ್ಲಿ ಹೆಚ್ಚು ಅನುದಾನ ಪಡೆಯಲಾಗುತ್ತದೆ ಎಂದು ತಿಳಿಸಿದರು. ಡಾ .ಎಸ್.ಬಿ.ದಂಡಿನ ಬರೆದಿರುವ ನಾನು ಮತ್ತು ರೇಷ್ಮೆ ಪುಸ್ತಕ ಓದಲು ನಾನು ಉತ್ಸುಕನಾಗಿದ್ದೇನೆ ಅವರ ಅನುಭವ ಮತ್ತು ಸಂಶೋಧನೆಗಳು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮತ್ತು ರೇಷ್ಮೆ ರೈತರಿಗೆ ಅನುಕೂಲವಾಗಲಿದೆ ಎಂದರು.