ಸವದಿಗೆ ಸಚಿವ ಸ್ಥಾನ ನೀಡಿದ್ದು ಏಕೆ..? ಉಮೇಶ್ ಕತ್ತಿ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಆ.20- ರಾಜಕೀಯದಲ್ಲಿ ನಾನು ಹಿರಿಯನಾಗಿದ್ದು , ಕ್ಷೇತ್ರದ ಜನ 8 ಬಾರಿ ನನ್ನನ್ನು ಆಯ್ಕೆ ಮಾಡಿ ಶಾಸಕನಾಗಿ ಮಾಡಿದ್ದಾರೆ. ಆದರೆ ನನಗೆ ಸಚಿವ ಸ್ಥಾನ ನೀಡದೆ ಇರುವುದು ಏಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಉಮೇಶ್ ಕತ್ತಿ ಇಂದಿಲ್ಲಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಹಲವು ಲೆಕ್ಕಾಚಾರ ಮಾಡಿ ಯುವಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿರಬಹುದು. ಆದರೆ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ನನ್ನ ಹಾಗೆಯೇ ಬಿಜೆಪಿಯಲ್ಲಿ 20 ಮಂದಿ ಹಿರಿಯರಿಗೆ ಇದೇ ರೀತಿ ನಿರಾಶೆಯಾಗಿದೆ. ಮುಂದೆ ಏನಾಗುತ್ತದೋ ನೋಡೋಣ ಎಂದು ಅಚ್ಚರಿ ಮೂಡಿಸಿದ್ದಾರೆ.

Facebook Comments