ಸೇಂಟ್ ಚಾಪೆಲ್ ಗಾಜಿನ ಕಿಟಕಿ ರಹಸ್ಯ ತಿಳಿಸುವ ಆ್ಯಪ್

ಈ ಸುದ್ದಿಯನ್ನು ಶೇರ್ ಮಾಡಿ

DS
ಪ್ಯಾರಿಸ್‍ನಲ್ಲಿರುವ ಪ್ರಾಚೀನ ಸೇಂಟ್ ಚಾಪೆಲ್ ಅನೇಕ ವಿಸ್ಮಯ ಸಂಗತಿಗಳ ಪ್ರಾರ್ಥನಾ ಮಂದಿರ. 13ನೇ ಶತಮಾನದ ಈ ಭವ್ಯ ಕಟ್ಟಡದ ನಿರ್ಮಾಣವೂ ಈಗಿನ ತಂತ್ರಶಿಲ್ಪಿಗಳನ್ನೂ ಚಕಿತಗೊಳಿಸುತ್ತದೆ. ಇದರ ಬೃಹತ್ ಗಾಜಿನ ಬಣ್ಣ ಬಣ್ಣದ ಕಿಟಕಿಗಳು ಯೇಸುಕ್ರಿಸ್ತನ ಚರಿತ್ರೆಯನ್ನು ಸಾರುವ ಚಿತ್ರಗಳನ್ನೂ ಹೊಂದಿದೆ. ಈಗ ಈ ಗಾಜಿನ ಗವಾಕ್ಷಿಗಳ ರಹಸ್ಯ ವಿವರಿಸುವ ಹೊಸ ಸ್ಮಾರ್ಟ್‍ಫೋನ್ ಆ್ಯಪ್‍ನನ್ನು ಸೃಷ್ಟಿಸಲಾಗಿದೆ.  ಫ್ರಾನ್ಸ್ ರಾಜಧಾನಿ ಮೋಹಕ ನಗರಿ ಪ್ಯಾರಿಸ್‍ನ ಹೃದಯ ಭಾಗದಲ್ಲಿರುವ 13ನೇ ಶತಮಾನದ ಸೆಂಟ್ ಚಾಪಲ್ ಪ್ರಾರ್ಥನಾ ಮಂದಿರ ಕುತೂಹಲಿಗಳಿಗೆ ಸದಾ ವಿಸ್ಮಯದ ಭವ್ಯ ಕಟ್ಟಡ.
ಫ್ರಾನ್ಸ್‍ನ ಒಂಭತ್ತನೇ ಚಕ್ರವರ್ತಿ ಲೂಯಿಸ್ ನಿರ್ಮಿಸಿದ ಈ ಕಟ್ಟಡ ಗೋತಿಕ್ ಶೈಲಿಯಲ್ಲಿ ನಿರ್ಮಾಣವಾಗಿದೆ. ಈ ಪ್ರಾರ್ಥನಾ ಮಂದಿರದಲ್ಲಿ 30 ಮೀಟರ್ ಎತ್ತರದ 15 ದೊಡ್ಡ ಬಣ್ಣಬಣ್ಣದ ಗಾಜಿನ ಕಿಟಕಿಗಳಿವೆ.

DS-1

ಈ ಗಾಜಿನ ಗವಾಕ್ಷಿಗಳಲ್ಲಿ ಯೇಸುಕ್ರಿಸ್ತನ ಜೀವನ ವೃತ್ತಾಂತ ಹಾಗೂ ಬೈಬಲ್ ಸಂದೇಶ ಸಾರುವ 1,113 ದೃಶ್ಯಗಳನ್ನು ಅತ್ಯಂತ ಕಲಾತ್ಮಕವಾಗಿ ಬಿಂಬಿಸಲಾಗಿದೆ. ಆದರೆ ಇವುಗಳನ್ನು ನೆಲದಿಂದ ವೀಕ್ಷಿಸಲು ಕಷ್ಟ. ಇಲ್ಲಿಗೆ ಭೇಟಿ ನೀಡುವ ವೀಕ್ಷಕರು 30 ಮೀಟರ್ ಎತ್ತರದ ಗಾಜಿನ ಕಿಟಕಿಗಳಲ್ಲಿ ಬಿಂಬಿಸಲ್ಪಟ್ಟ ದೃಶ್ಯಗಳನ್ನು ನೋಡುವುದು ಈವರೆಗೆ ಕಷ್ಟವಾಗಿತ್ತು. ಆದರೆ ಈಗ ಅವುಗಳನ್ನು ವೀಕ್ಷಿಸಿ ಖುಷಿಪಡಲು ಸಾಧ್ಯವಾಗಿದೆ. ಇದು ಸಾಧ್ಯವಾಗಿರುವುದು ಸ್ಮಾರ್ಟ್‍ಫೋನ್ ಆ್ಯಪ್ ತಂತ್ರಜ್ಞಾನದಿಂದ.

ಚಾಪಲ್‍ನ ರಕ್ಷಕ ಹಾಗೂ ರಹಸ್ಯ ಸಂಕೇತ ಮತ್ತು ಚಿತ್ರಗಳ ಬಹಿರಂಗಗೊಳಿಸುವ ಹವ್ಯಾಸಿ ಕೋಡರ್ ಪ್ರಾನ್ಸಿಸ್ ಮಾರ್ಗೊಟ್ ಈಗ ಇದಕ್ಕಾಗಿ ಹೊಸ ಅಪ್ಲಿಕೇಷನ್ ಸೃಷ್ಟಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವ ವೀಕ್ಷಕರು ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ ಈ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಂಡರೆ 15 ಬೃಹತ್ ಕಿಟಕಿಗಳ ಗಾಜಿನ ಮೇಲೆ ಇರುವ ದೃಶ್ಯಗಳನ್ನು ದೊಡ್ಡ ಗಾತ್ರದ ಮೂಲಕ ನೋಡಿ ಅವುಗಳ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಲು 100 ಯೂರೋ ಸೆಂಟ್‍ಗಳನ್ನು ನೀಡಬೇಕು. ಇಂಗ್ಲಿಷ್, ಫ್ರೆಂಚ್, ಇಟಾಲಿಯನ್, ಸ್ಪಾನಿಶ್, ಜರ್ಮನ್ ಹಾಗೂ ಮ್ಯಾಂಡರೀನ್ ಚೀನಿ-ಈ ಆರು ಭಾಷೆಗಳಲ್ಲಿ ದೃಶ್ಯಗಳೊಂದಿಗೆ ವಿವರಣೆಗಳು ಲಭ್ಯ.

DS-2

Facebook Comments

Sri Raghav

Admin