ಪಾಕಿಸ್ತಾನ್ ತಾಲಿಬಾನ್ ಲೀಡರ್ ಮೆಹಸೂದ್‍ನನ್ನ ಕಪ್ಪುಪಟ್ಟಿಗೆ ಸೇರಿಸಿದ ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ,ಜು.18-ವಿಶ್ವದ ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್‍ಖೈದಾ ಜೊತೆ ಸಂಪರ್ಕ ಹೊಂದಿದ್ದ ಹಾಗೂ ಅದಕ್ಕೆ ಹಣಕಾಸು ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಭಯೋತ್ಪಾದನೆ ಸಂಘಟನೆಯ ನಾಯಕ ನೂರ್ ಆಲಿ ಮೆಹಸೂದ್‍ನನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಿದೆ.

ಜೊತೆಗೆ ಈತನನ್ನು ಜಾಗತಿಕ ಉಗ್ರ ಎಂದು ಕೂಡ ವಿಶ್ವಸಂಸ್ಥೆ ಘೋಷಣೆ ಮಾಡಿದ್ದು, ಈ ಸಂಘಟನೆಗಳ ಜೊತೆ ಗುರುತಿಸಿಕೊಂಡವರನ್ನು ಕೂಡ ಕಪ್ಪುಪಟ್ಟಿ ಸೇರಿಸುವುದಾಗಿ ಎಚ್ಚರಿಕೆ ನೀಡಿದೆ. ಮೂಲತಃ ಪಾಕಿಸ್ತಾನ ಪ್ರಜೆಯಾದ ನೂರ್ ಆಲಿ ಮೆಹಸೂದ್‍ನ ಪ್ರಯಾಣ ನಿರ್ಬಂಧ, ಆಸ್ತಿ ಮುಟ್ಟುಗೋಲು ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೂ ಕಡಿವಾಣ ಹಾಕಲಾಗಿದೆ.

ವಿಶ್ವಸಂಸ್ಥೆ ಭದ್ರತಾ ಸಂಸ್ಥೆಯ 1267 ಐಎಸ್‍ಐಎಲ್ ಮತ್ತು ಅಲ್‍ಖೈದಾ ನಿರ್ಬಂಧ ಸಮಿತಿ ಮೆಹಸೂದ್‍ನನ್ನು ನಿರ್ಬಂಧ ಪಟ್ಟಿಗೆ ಸೇರಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ.

ಅಲ್‍ಖೈದಾ ಸಂಘಟನೆ ಮೂಲಕ ಈತ ಬೇರೆ ಬೇರೆ ರಾಷ್ಟ್ರಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ಹೊಂದಿಸುವುದು, ಉಗ್ರ ಚಟುವಟಿಕೆಗಳಿಗೆ ಯೋಜನೆ ರೂಪಿಸುವುದು, ಅತ್ಯಂತ ಹೀನಕೃತ್ಯಗಳಿಗೂ ಪ್ರಚೋದನೆ ನೀಡುವುದು ಹಾಗೂ ಭಯೋತ್ಪಾದನೆಗೆ ಯುವಕರನ್ನು ಸೆಳೆದುಕೊಳ್ಳುವ ಹಾಗೂ ಎಲ್ಲೇ ಭಯೋತ್ಪಾದನೆ ಚಟುವಟಿಕೆಗಳು ನಡೆದರೂ ಅದಕ್ಕೆ ಪ್ರತ್ಯಕ್ಷ ಇಲ್ಲ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದ ಎಂಬ ಆರೋಪವಿದೆ.

2018ರ ಜೂನ್‍ನಲ್ಲಿ ಟಿಟಿಪಿ ನಾಯಕ ಮೌಲಾನ ಫಜುಲ್ಲ ನಿಧನರಾದ ಬಳಿಕ ತೆಹ್ರಿಕ್-ಇ- ತಾಲಿಬಾನ್ ಪಾಕಿಸ್ತಾನ ಸಂಘಟನೆಯನ್ನು ರೂಪಿಸಿಕೊಂಡು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿದ್ದ. ವಿಶ್ವದ ಅತ್ಯಂತ ಅಪಾಯಕಾರಿ ಉಗ್ರನಾದ ಒಸಾಮ ಬಿನ್ ಲಾಡೆನ್‍ನ ಅಲ್‍ಖೈದಾ ಭಯೋತ್ಪಾದಕ ಸಂಘಟನೆಗೂ ಈತ ನೆರವು ನೀಡಿದ್ದ ಎನ್ನಲಾಗುತ್ತಿದೆ.

ಅಲ್‍ಖೈದಾ ಸಂಘಟನೆಯನ್ನು ವಿಶ್ವಸಂಸ್ಥೆ 2011ರಲ್ಲಿ ಕಪ್ಪುಪಟ್ಟಿಗೆ ಸೇರಿಸಿದ ಬಳಿಕ ಈತ ಟಿಟಿಪಿಯಲ್ಲಿ ಗುರುತಿಸಿಕೊಂಡು ಅನೇಕ ದುಷ್ಕøತ್ಯಗಳಲ್ಲಿ ನೇರವಾಗಿಯೇ ಶಾಮೀಲಾಗಿದ್ದ.

2019ರ ಪಾಕಿಸ್ತಾನದ ಖೈಬರ್‍ನಲ್ಲಿ ಪಾಕ್ ಸೈನಿಕರ ಮೇಲೆ ಬಾಂಬ್ ದಾಳಿ ನಡೆಸಿರುವುದು ಅದೇ ವರ್ಷದಲ್ಲಿ ಉತ್ತರ ವಜ್ಜೀಸ್ಥಾನದಲ್ಲೂ ಸೇನಾಪಡೆಗಳ ಮೇಲೆ ಈ ಸಂಘಟನೆ ದಾಳಿ ನಡೆಸಿತ್ತು.

ಇದಲ್ಲದೆ 2010 ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಪಾಕಿಸ್ತಾನದ ಪೇಶಾವರದಲ್ಲಿರುವ ಅಮೆರಿಕದ ಕನ್ಸಲೇಟ್ ಕಚೇರಿ ಮೇಲೆ ದಾಳಿ ನಡೆಸಿ ಆರು ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು. ಇದೇ ರೀತಿ ಇನ್ನು ಅನೇಕ ದೃಷ್ಕøತ್ಯಗಳನ್ನು ಈತ ನಡೆಸಿದ್ದ.

2019ರಲ್ಲಿ ಅಮೆರಿಕವು ನೂರ್ ಆಲಿ ಮೆಹಸೂದ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು.

Facebook Comments

Sri Raghav

Admin