ಸೆ.27ರಂದು ವಿಶ್ವಸಂಸ್ಥೆ ಮಹಾಧೀವೇಶನದಲ್ಲಿ ಮೋದಿ ಭಾಷಣ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಸೆ.9- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ತಿಂಗಳ 27ರಂದು ವಿಶ್ವಸಂಸ್ಥೆಯ ವಾರ್ಷಿಕ ಉನ್ನತ ಮಟ್ಟದ ಮಹಾ ಸಭೆಯ (ಯುಎನ್ ಜನರಲ್ ಅಸೆಂಬ್ಲಿ) ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವರು.  ನ್ಯೂಯಾರ್ಕ್‍ನಲ್ಲಿ ಒಂದು ವಾರ ಕಾಲ ವಾಸ್ತವ್ಯ ಹೂಡುವ ಪ್ರಧಾನಿ ಅವರು ದ್ವಿಪಕ್ಷೀಯ ಮತ್ತು ಬಹು ಪಕ್ಷೀಯ ಸಭೆಗಳೂ ಸೇರಿದಂತೆ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಸೆಪ್ಟೆಂಬರ್ 24 ರಿಂದ ಅರಂಭವಾಗುವ ಈ ಅಧಿವೇಶನ ಸೆ.30ರವರೆಗೆ ನಡೆಯಲಿದೆ.  ಯುಎನ್ ಜನರಲ್ ಅಸೆಂಬ್ಲಿ(ಯುಎನ್‍ಜಿಎ)ಯ 74 ಅಧಿವೇಶದ ಸಾಮಾನ್ಯ ಚರ್ಚೆಯಲ್ಲಿ ಭಾಷಣ ಮಾಡುವ ವಿವಿಧ ದೇಶಗಳ ಮುಖ್ಯಸ್ಥರು, ರಾಷ್ಟ್ರಾಧ್ಯಕ್ಷರು ಮತ್ತು ಪ್ರಧಾನಮಂತ್ರಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

2013ರಲ್ಲಿ ಮೋದಿ ಯುಎನ್‍ಜಿಎ ಅಧಿವೇಶದಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿ ಗಮನಸೆಳೆದಿದ್ದರು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅದೇ ದಿನ, ಮೋದಿ ಭಾಷಣದ ನಂತರ ಜಾಗತಿಕ ನಾಯಕರನ್ನು ಉದ್ದೇಶಿಸಿ ಮಾತನಾಡುವರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆ.24ರಂದು ಬೆಳಗ್ಗೆ ಭಾಷಣ ಮಾಡುವರು.

ಅಧಿವೇಶನದಲ್ಲಿ 112 ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರಗಳ 48 ಮುಖ್ಯಸ್ಥರು ಮತ್ತು 30 ವಿದೇಶಾಂಗ ಸಚಿವರು ಭಾಗವಹಿಸಲಿದ್ದಾರೆ.

Facebook Comments