ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಷಣ ಮಾಡುವ ವಿಶ್ವದ ಏಕೈಕ ನಾಯಕ ಟ್ರಂಪ್..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಜು.31- ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿ ಸೆಪ್ಟೆಂಬರ್‍ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದ ಮೇಲೆ ಕೊರೊನಾ ವೈರಸ್ ಕರಾಳ ಛಾಯೆ ಆವರಿಸಿದೆ.

ಈ ಹಿನ್ನೆಲೆಯಲ್ಲಿ ವಿಶ್ವದ ವಿವಿಧ ದೇಶಗಳ ಮಹಾನಾಯಕರು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸೆಷನ್‍ನಲ್ಲಿ ಭಾಗವಹಿಸುವುದು ಅನುಮಾನ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮಹಾಧಿವೇಶನದಲ್ಲಿ ಭಾಷಣ ಮಾಡುವ ವಿಶ್ವದ ಏಕಮಾತ್ರ ನಾಯಕರಾಗಲಿದ್ಧಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೆರಿಕ ಅಧ್ಯಕ್ಷರು ಖುಚ್ಚಾಗಿ ಭಾಷಣ ಮಾಡುವ ಬಗ್ಗೆ ನಮಗೆ ಆಶಾಭಾವನೆ ಇದೆ. ಹೀಗಾಗಿ ಟ್ರಂಪ್ ಖುದ್ದಾಗಿ ಭಾಷಣ ಮಾಡುವ ವಿಶ್ವದ ಏಕೈಕ ನಾಯಕರಾಗಲಿದ್ದಾರೆ ಎಂದು ಅಮೆರಿಕ ರಾಯಭಾರಿ ಕೆಲ್ಲಿ ಕ್ರಾಫ್ಟ್ ಹೇಳಿದ್ದಾರೆ.

ಸೆಪ್ಟೆಂಬರ್‍ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನವು ಅತ್ಯಂತ ಮಹತ್ವವಾದುದು. ಏಕೆಂದರೆ ಈ ವರ್ಷ ವಿಶ್ವಸಂಸ್ಥೆಗೆ 75ನೇ ವಾರ್ಷಿಕೋತ್ಸವದ ಸಂಭ್ರಮ ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಮಹಾಧಿವೇಶನದಲ್ಲಿ ನಾವು ಮಾನವ ಹಕ್ಕುಗಳ ರಕ್ಷಣೆ, ಪಾರದರ್ಶಕ ಆಡಳಿತ, ಉತ್ತರದಾಯಿತ್ವ ಸೇರಿದಂತೆ ಮೊದಲಾದ ಪ್ರಮುಖ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತೇವೆ ಎಂದು ಕೆಲ್ಲಿ ಕ್ರಾಪ್ಟ್ ಹೇಳಿದ್ದಾರೆ.

ವಿಶ್ವಸಂಸ್ಥೆಯ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೊರೊನಾ ಪಿಡುಗಿನಿಂದಾಗ ವಿಶ್ವದ ನಾಯಕರ ಅನುಪಸ್ಥಿತಿಯಲ್ಲಿ ಮಹಾದಿವೇಶನವು ವಿಡಿಯೋ ಲಿಂಕ್ ಮೂಲಕ ನಡೆಯಿಲಿದೆ.

ವೈರಸ್ ಆತಂಕದಿಂದಾಗಿ ಜಗತ್ತಿನ ಅನೇಕ ಅಧಿಪತಿಗಳು ಈ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ. ವಿಡಿಯೋ ಕಾನ್ಫೆರೆನ್ಸ್ ಮೂಲಕ ತಮ್ಮ ದೇಶಗಳಿಂದಲೇ ಭಾಷಣ ಮಾಡಲಿದ್ದಾರೆ.

ಆದರೆ ಟ್ರಂಪ್ ವಾಷಿಂಗ್ಟನ್‍ನಿಂದ ನ್ಯೂಯಾರ್ಕ್‍ಗೆ ತೆರಳಿ ಖುದ್ದಾಗಿ ವಿಶ್ವವನ್ನು ಉದ್ದೇಶಿಸಿ ಮಾತನಾಡುವ ಏಕೈಕ ನಾಯಕರಾಗಲಿದ್ದಾರೆ.

Facebook Comments

Sri Raghav

Admin