ಐಸಿಸ್ ದಕ್ಷಿಣ ಏಷ್ಯಾ ಶಾಖೆಗೆ ವಿಶ್ವಸಂಸ್ಥೆ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಮೇ. 15- ಅತ್ಯಂತ ಕ್ರೂರ ಕೃತ್ಯಗಳ ಮೂಲಕ ವಿಶ್ವದಲ್ಲಿ ಆತಂಕ ಸೃಷ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‍ಐಎಸ್ ಅಥವಾ ಐಸಿಸ್) ಭಯೋತ್ಪಾದನೆ ಸಂಘಟನೆಯ ದಕ್ಷಿಣ ಏಷ್ಯಾ ಶಾಖೆಗೆ ವಿಶ್ವಸಂಸ್ಥೆ ಇಂದು ನಿರ್ಬಂಧ ವಿಧಿಸಿದೆ.

ಈ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧಿಸೂಚನೆ ಹೊರಡಿಸಿದೆ. ಅಲ್‍ಖೈದಾ ಉಗ್ರಗಾಮಿ ಸಂಘಟನೆ ಜತೆ ಸೇರಿ ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕರ ನೇತೃತ್ವದಲ್ಲಿ ಐಸಿಸ್ ದಕ್ಷಿಣ ಏಷ್ಯಾ ಶಾಖೆಗೆ ಕಾರ್ಯನಿರ್ವಹಿಸುತ್ತಿತ್ತು.

ಈ ಶಾಖೆಯೂ ಅಪ್ಘಾನಿಸ್ಥಾನ ಮತ್ತು ಪಾಕಿಸ್ತಾನದಲ್ಲಿ ಭೀಕರ ವಿಧ್ವಂಸಕ ದಾಳಿಗಳನ್ನು ನಡೆಸಿ 150ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು. ಐಸಿಸ್‍ನ ಈ ಶಾಖೆಯನ್ನು ನಿರ್ಬಂಧಿಸುವಂತೆ ವಿವಿಧ ದೇಶಗಳಿಂದ ವ್ಯಾಪಕ ಒತ್ತಡವಿತ್ತು.

ಅಲ್‍ಖೈದಾ ಮತ್ತು ಇತರ ಭಯೋತ್ಪಾದನೆ ಸಂಘಟನೆಗಳ ನಿಗ್ರಹ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಮಿತಿಯು ಈ ಶಾಖೆಯನ್ನು ನಿರ್ಬಂಧಿಸುವ ಮೂಲಕ ಉಗ್ರಗಾಮಿ ಸಂಘಟನೆಗೆ ದೊಡ್ಡ ಪೆಟ್ಟು ನೀಡಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ