ಅಂದು ಮಕ್ಕಳು ನಿಗೂಢವಾಗಿ ಸಾಯುತ್ತಿದ್ದರು..! ಆ ಪ್ರಕರಣವನ್ನು ಬೇದಿಸಿದ ರೀತಿಯೇ ರೋಚಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬಿ.ಕೆ. ಶಿವರಾಮ್, ನಿವೃತ್ತ ಪೊಲೀಸ್ ಅಧಿಕಾರಿ. ಇಡೀ ರಾಜ್ಯದ ಜನತೆಗೆ ಇವರು ಚಿರಪರಿಚಿತ ದಕ್ಷ ಅಧಿಕಾರಿ. ಅಂದಿನ ಕಾಲಘಟ್ಟದಲ್ಲೇ ಕೊತ್ವಾಲ್ ರಾಮಚಂದ್ರ, ಡಾನ್ ಜಯರಾಜ್ ರಂತಹ ಖತರ್ನಾಕ್ ರೌಡಿಗಳು ಇವರ ಹೆಸರನ್ನು ಕೇಳಿದ್ರೆ ಕುಳಿತಲ್ಲಿಯೇ ಬೆವರುತ್ತಿದ್ದರು.

ಅಂದ ಹಾಗೇ 1972ರಲ್ಲಿ ಇಲಾಖೆ ಸೇರಿದ ಬಿ.ಕೆ.ಶಿವರಾಮ್ ಅವರು ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಿಂದ ತಮ್ಮ ವೃತ್ತಿ ಜೀವನ ಪ್ರಾರಂಭಿಸುತ್ತಾರೆ. ಸುಧೀರ್ಘ 31ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ.

ಇವರು ತಮ್ಮ ವೃತ್ತಿಜೀವನದಲ್ಲಿ ಭೇದಿಸಿದ ಪ್ರತೀ ಪ್ರಕರಣಗಳು ಕುತೂಹಲ, ರೋಚಕ ಭರಿತವಾಗಿದ್ದಾಗಿದೆ. ಆ ಬಗ್ಗೆ ನಮ್ಮ ‘ಈ ಸಂಜೆ ನ್ಯೂಸ್’ ಜೊತೆ ಮುಕ್ತವಾಗಿ ತಮ್ಮ ವೃತ್ತಿಬದುಕಿನ ಪಯಣದ ಕುರಿತು ಮಾತನಾಡಿದ್ದಾರೆ.

ಇಲಾಖೆ ಸೇರಿದ ಪ್ರಾಂಭದಲ್ಲೇ ಇವರಿಗೆ ದೊಡ್ಡ ಸವಾಲು ಎದುರಾಗಿದ್ದು, ಮಾಗಡಿ ರಸ್ತೆ ಠಾಣೆ ಮತ್ತು ಶ್ರೀರಾಮಪುರಂ ಪೊಲೀಸ್ ಠಾಣೆ ಸರಹದ್ದಿನಲ್ಲಿ ಮಕ್ಕಳ ಕತ್ತು ಕೂಯ್ದು ನಿಗೂಢವಾಗಿ ಕೊಲೆ ಮಾಡಲಾಗುತ್ತಿತ್ತು. ಈ ಪ್ರಕರಣ ಭೇದಿಸಲು ರಾತ್ರಿ ಇಡೀ ಸ್ಮಶಾನದಲ್ಲಿ ಕಾರ್ಯಾಚರಣೆಗೆ ಇಳಿಯಬೇಕಾಯಿತು..! ಕಡೆಗೆ ಈ ಪ್ರಕರಣ ಯಾವ ತಿರುವು ಪಡೆದುಕೊಂಡಿತು ಎಂಬ ಸಂಗತಿಯೇ ರೋಚಕ ಮತ್ತು ಭಯಾನಕ..! ಈ ಎಲ್ಲಾ ವಿಷಯವನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ರೆ ಈ ವಿಡಿಯೋವನ್ನು ಪ್ರಾರಂಭದಿಂದ ಕೊನೆಯವರೆಗೂ ಮಿಸ್ ಮಾಡ್ದೇ ನೋಡಿ.

Facebook Comments

Sri Raghav

Admin