ನಿರುದ್ಯೋಗಿ ಯುವತಿಯರಿಗೆ ಅ. 21 ರಿಂದ ಉಚಿತ ಹೊಲಿಗೆ ತರಬೇತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.20- ಕೆನರಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ನಿರುದ್ಯೋಗಿ ಯುವತಿಯರಿಗೆ ಅಕ್ಟೋಬರ್ 21ರಿಂದ 30 ದಿನಗಳ ನಿರುದ್ಯೋಗಿ ಯುವತಿಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ತರಬೇತಿಯು ಉಚಿತವಾಗಿದ್ದು, ಉಚಿತ ಊಟ ಹಾಗೂ ವಸತಿ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ.

ಸ್ವಯಂ ಉದ್ಯೋಗಿಯಾಗ ಬಯಸುವ 18ರಿಂದ 45 ವರ್ಷದೊಳಗಿನ ಕನಿಷ್ಠ 8ನೇ ಓದಿರುವ ಹಾಗೂ ಸ್ಥಳೀಯ ಭಾಷೆ ತಿಳಿದ, ಬೆಂಗಳೂರು ಗ್ರಾಮಾಂತರ/ನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ನಿರುದ್ಯೋಗಿ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಅ.21ರಂದು ಬೆಳಗ್ಗೆ 10.30ಕ್ಕೆ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು ಇಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳ ಬಹುದಾಗಿದೆ.

ಸಂದರ್ಶನಕ್ಕೆ ಬಿಪಿಎಲ್ ಕಾರ್ಡ್, ವಿದ್ಯಾರ್ಹತೆ ಮತ್ತು ವಿಳಾಸದ ದಾಖಲಾತಿಗಳನ್ನು ತಂದಿರಬೇಕು. ಹೆಚ್ಚಿನ ಮಾಹಿತಿಗೆ ದೂ: 8970476050, 9535774621(ಕಚೇರಿ ದೂರವಾಣಿ) ಸಂಪರ್ಕಿಸ ಬಹುದಾಗಿದೆ.

Facebook Comments