ಟ್ರೆಂಡಿಂಗ್ ಆಗುತ್ತಿದೆ ನಿರುದ್ಯೋಗಿ ನೋಂದಣಿ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.24- ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ಧವಾಗಿರುವವರು ಮೊಬೈಲ್ ನಂಬರ್ 8151994411ಗೆ ಮಿಸ್ಡ್‍ಕಾಲ್ ಕೊಡುವಂತೆ ಕಾಂಗ್ರೆಸ್ ಕರೆ ನೀಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ತಿದ್ದುಪಡಿ ಮತ್ತು ಎನ್‍ಆರ್‍ಸಿ ವಿರುದ್ಧವಾಗಿ ಯುವ ಕಾಂಗ್ರೆಸ್ ನಿರುದ್ಯೋಗಿ ನೋಂದಣಿ ಅಭಿಯಾನ ಕೈಗೊಂಡಿದೆ.

ಯುವ ಕಾಂಗ್ರೆಸ್‍ನ ಈ ಅಭಿಯಾನಕ್ಕೆ ಕಾಂಗ್ರೆಸ್‍ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ. ರಾಜ್ಯದ ಎಲ್ಲಾ ಪ್ರಮುಖ ನಾಯಕರು ನಿರುದ್ಯೋಗಿ ನೋಂದಣಿ ಅಭಿಯಾನದಲ್ಲಿ ಭಾಗಿಯಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ನಾಯಕರು ಯುವ ಕಾಂಗ್ರೆಸ್‍ನ ಅಭಿಯಾನವನ್ನು ಬೆಂಬಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನಕ್ಕೆ ಬಿಜೆಪಿ ಬೆಂಬಲಿಗರಿಂದ ಭಾರೀ ವಿರೋಧವೂ ವ್ಯಕ್ತವಾಗಿದೆ. ಇದೊಂದು ನಕಲಿ ಸರ್ವೆಯಾಗಿದೆ.

ನಿರುದ್ಯೋಗಿಗಳು ಮಿಸ್ಡ್‍ಕಾಲ್‍ಕೊಡುವುದಿಲ್ಲ. ಉದ್ಯೋಗಿಗಳು ಮಿಸ್ಡ್‍ಕಾಲ್ ಕೊಡುತ್ತಾರೆ. ಆಗಿದ್ದರೆ ನಿರುದ್ಯೋಗವನ್ನು ನಿಖರವಾಗಿ ಗುರುತಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಬಿಜೆಪಿಯ ಬೆಂಬಲಿಗರು ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಕೆಲಸವಿಲ್ಲದೆ ಈ ರೀತಿಯ ಅಭಿಯಾನಗಳನ್ನು ಕೈಗೆತ್ತಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಬೆಂಬಲಿಗರು ಆರೋಪಿಸುತ್ತಿದ್ದಾರೆ.

Facebook Comments