ಶಾಂತಿ ಮತ್ತು ಸುರಕ್ಷತೆಯ ವಿಷಯದಲ್ಲಿ ಭಾರತ ಕಾರ್ಯ ಶ್ಲಾಘಿನೀಯ : ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಜುಲೈ 22 (ಪಿಟಿಐ) ಶಾಂತಿ ಮತ್ತು ಸುರಕ್ಷತೆಯ ವಿಷಯದಲ್ಲಿ ಭಾರತ ಕಾರ್ಯ ಶ್ಲಾಘಿನೀಯ ಎಂದು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಅಧ್ಯಕ್ಷ ವೊಲ್ಕಾನ್ ಬೊಜ್ರ್ಕಿ ಹೇಳಿದ್ದಾರೆ. ಮುಂದಿನ ತಿಂಗಳು ನೆಡೆಯಲಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ಪಾತ್ರ ಮಹತ್ವ ಪಡೆದಿದೆ, ಭಯೋತ್ಪಾದನೆಯಿಂದ ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯು ಮುಖ್ಯಾಂಶಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಭದ್ರತಾ ಮಂಡಳಿಯ ಅಧ್ಯಕ್ಷರಾಗಿರುವ ಖಾಯಂ ಪ್ರತಿನಿಧಿ ಭಾರತದದ ರಾಯಭಾರಿ ಟಿ ಎಸ್ ತಿರುಮೂರ್ತಿ ಅವರೊಂದಿಗೆ ಸಮನ್ವಯ ಸಭೆ ನಡೆಸಿ ಅವರು ಮಾತನಾಡಿದರು . ಕಡಲ ಸುರಕ್ಷತೆ ಮತ್ತು ತಂತ್ರಜ್ಞಾನ ಮತ್ತು ಶಾಂತಿಪಾಲನೆ ಕುರಿತು ಉನ್ನತ ಮಟ್ಟದ ಸಭೆಯಲ್ಲಿ 15 ರಾಷ್ಟ್ರಗಳು ಮುಕ್ತವಾಗಿ ಚರ್ಚಿಸಲಿದೆ.

ಭಯೋತ್ಪಾದಕ ಕೃತ್ಯಗಳಿಂದ ಉಂಟಾಗುವ ಶಾಂತಿ ಮತ್ತು ಭದ್ರತೆಗೆ ದಕ್ಕೆ ಮುಖ್ಯ ವಿಷಯವಾಗಿದೆ ಎಂದು ಹೇಳಿದರು ಭಾರತದ ಅತ್ಯಮೂಲ್ಯ ಸಲಹೆ ಮತ್ತು ಕೆಲಸಗಳು ಶ್ಲಾಘಿನೀಯ ನಮಗೆ ಸಂತೋಷ ತಂದಿದೆ ಎಂದು ಹೇಳಿದ್ದಾರೆ.ಇದಕ್ಕೆ ಟಿ ಎಸ್ ತಿರುಮೂರ್ತಿ ಅವರು ಧನ್ಯವಾದ ತಿಳಿದೆ ಬೆಂಬಲಕ್ಕೆ ಅಭಾರಿ ಎಂದು ಹೇಳಿದ್ದಾರೆ

Facebook Comments