ಯುನಿಸೆಫ್‍ನಿಂದ ಭಾರತಕ್ಕೆ 3000 ಅಮ್ಲಜನಕ ಸಾಂದ್ರಕಗಳ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ,ಮೇ 1-ಕಂಟಕವಾಗಿ ಪರಿಣಮಿಸಿರುವ ಕೊರೊನಾ ನಿಯಂತ್ರಣಕ್ಕಾಗಿ ಭಾರತಕ್ಕೆ 3000 ಅಮ್ಲಜನಕ ಸಾಂದ್ರಕಗಳು ಸೇರಿದಂತೆ ತುರ್ತು ಸಂದರ್ಭದಲ್ಲಿ ಬಳಸುವ ಜೀವರಕ್ಷಕ ಪರಿಕರಗಳನ್ನು ವಿಶ್ವಸಂಸ್ಥೆಯ ಮಕ್ಕಳ ಘಟಕ ರವಾನಿಸಿದೆ.

ಇದರ ಜತೆಗೆ ಭಾರತೀಯರೆಲ್ಲರಿಗೂ ಲಸಿಕೆ ಹಾಕುವ ಕಾರ್ಯದಲ್ಲೂ ಭಾಗಿಯಾಗಿರುತ್ತೇವೆ ಎಂದು ಯೂನಿಸೆಫ್ ಘೋಷಿಸಿದೆ. ಮಹಾರಾಷ್ಟ್ರ ಹಾಗೂ ಈಶಾನ್ಯ ರಾಜ್ಯಗಳ ಕೆಲ ಆಸ್ಪತ್ರೆಗಳಲ್ಲಿ 25 ಅಮ್ಲಜನಕ ಘಟಕಗಳನ್ನು ತೆರೆಯಲಾಗುವುದು ಜತೆಗೆ ದೇಶದ್ಯಾಂತ ಥರ್ಮಲ್ ಸ್ಕ್ಯಾನರ್‍ಗಳನು ಇನ್‍ಸ್ಟಾಲ್ ಮಾಡಲು ತೀರ್ಮಾನಿಸಿದ್ದೇವೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ವಕ್ತಾರ ಫರಾನ್ ಹಕ್ ತಿಳಿಸಿದ್ದಾರೆ.

ಭಾರತದಲ್ಲಿರುವ ಕೊರೊನಾ ಲಸಿಕೆಗಳನ್ನು ಸಂಗ್ರಹಿಸಿಡಲು ಸಹಕಾರಿಯಾಗುವಂತೆ ಭಾರತಕ್ಕೆ ವಿಶೇಷ ರೆಫ್ರಿಜರೇಟರ್‍ಗಳನ್ನು ಯುನಿಸೆಫ್ ರವಾನಿಸಲಿದೆ ಎಂದು ಅವರು ವಿವರಣೆ ನೀಡಿದ್ದಾರೆ.

Facebook Comments

Sri Raghav

Admin