ಬಜೆಟ್ ಅವೇಶನ : ಜ.30 ರಂದು ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.20- ಮುಂಬರುವ ಹಣಕಾಸು ವರ್ಷದ ಸಂಸತ್ ಬಜೆಟ್ ಅವೇಶನದ ಸರ್ವಪಕ್ಷ ಸಭೆ ಜ.30 ರಂದು ನಡೆಯಲಿದ್ದು, ಸಭೆÀಯ ನೇತೃತ್ವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಸತ್ತಿನ ಅವೇಶನಕ್ಕಾಗಿ ಸರ್ಕಾರ ತನ್ನ ಶಾಸಕಾಂಗ ಕಾರ್ಯಸೂಚಿಯನ್ನು ಮಂಡಿಸಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಬುಧವಾರ ಹೇಳಿದ್ದಾರೆ.

ಸಭೆ ವರ್ಚುವಲ್ ಆಗಿ ನಡೆಯಲಿದ್ದು, ಎಲ್ಲ ಪಕ್ಷಗಳ ಮುಖಂಡರಿಗೆ ಸಭಾ ಕಾರ್ಯಕ್ರಮದ ಆಹ್ವಾನವನ್ನು ಕಳಿಸ ಲಾಗಿದೆ. ಸಂಸತ್ತಿನ ಪ್ರತಿ ಅವೇಶನ ಆರಂಭವಾಗುವ ಮುನ್ನ ಅದರ ಸುಗಮ ಕಲಾಪವನ್ನು ಖಚಿತಪಡಿಸಿಕೊಳ್ಳಲು ಸರ್ವಪಕ್ಷ ಸಭೆ ಕರೆಯುವುದು ಒಂದು ವಾಡಿಕೆಯ ಕಾರ್ಯವಿಧಾನವಾಗಿದೆ. ಆದರೆ, ಜ.29 ರಂದು ಅವೇಶನ ಪ್ರಾರಂಭವಾದ ಒಂದು ದಿನದ ನಂತರ (ಜ.30) ಈ ಬಾರಿ ಇದನ್ನು ನಡೆಸಲಾಗುತ್ತಿದೆ.

ಅವೇಶನ ಮೊದಲ ಭಾಗ ಜ.29 ರಂದು ಆರಂಭವಾಗಿ ಫೆ.15ಕ್ಕೆ ಕೊನೆಗೊಂಡರೆ, ಎರಡನೇ ಭಾಗ ಮಾ.8 ರಿಂದ ಏ.8 ರವರೆಗೆ ನಡೆಯಲಿದೆ ಎಂದು ವಿವರಣೆ ನೀಡಿದ್ದಾರೆ.

Facebook Comments

Sri Raghav

Admin