ಬಿಗ್ ಬ್ರೇಕಿಂಗ್ : ಕೇಂದ್ರದಿಂದ ನೆರೆ ಪರಿಹಾರದ ಹಣ ಬಿಡುಗಡೆ, ಎಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20-ಭಾರೀ ಜಲಪ್ರಳಯದಿಂದ ನಲುಗಿರುವ ಕರ್ನಾಟಕ,ಹಿಮಾಚಲ ಪ್ರದೇಶಕ್ಕೆ ಕೇಂದ್ರಸರ್ಕಾರ 4432.10 ಕೋಟಿ ರೂ. ಗಳನ್ನು ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ.
ಕೇಂದ್ರಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ತುರ್ತಾಗಿ ಆಯಾ ರಾಜ್ಯಗಳಿಗೆ ನೆರವು ನೀಡಲು ಸಮ್ಮತಿಸಲಾಗಿದೆ.

ಒಡಿಸ್ಸಾಗೆ 3338.22 ಕೋಟಿ ರೂ., ಕರ್ನಾಟಕಕ್ಕೆ 1029.39 ಕೋಟಿ ಹಾಗೂ ಹಿಮಾಚಲ ಪ್ರದೇಶಕ್ಕೆ 64.49 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತಾರಾಮನ್, ಕೃಷಿ ಮತ್ತು ರೈತರ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ನರೇಂದ್ರ ಸಿಂಗ್‍ತೋಮರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದಲ್ಲದೆ, ಒಟ್ಟಾರೆ ಎಲ್ಲಾ ರಾಜ್ಯಗಳಿಗೂ 2019-20ನೇ ಸಾಲಿಗೆ ಈಗಾಗಲೇ 9.658 ಕೋಟಿ ರೂ.ಗಳನ್ನು ರಾಷ್ಟ್ರೀಯ ವಿಪತ್ತು ನಿಧಿಗೆ ಹಂಚಿಕೆ ಮಾಡಲಾಗಿದೆ. ಈ ನಡುವೆ ಎಸ್‍ಡಿಆರ್‍ಎಫ್ ಅಡಿ ಈಗಾಗಲೇ 6,104 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಇದೇ ವೇಳೆ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಪರಿಹಾರ ಕಾರ್ಯಗಳಿಗಾಗಿ ಎನ್‍ಡಿಆರ್‍ಎಫ್ ಸೇರಿದಂತೆ ರಕ್ಷಣಾಪಡೆಗಳು ಹಾಗೂ ಇತರೆ ಪರಿಹಾರ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲು ಕೂಡ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕರ್ನಾಟಕ ರಾಜ್ಯದ 17 ಜಿಲ್ಲೆಗಳಲ್ಲಿ ಸುಮಾರು 40 ಸಾವಿರ ಕೋಟಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದರು. ಇದರ ಬಗ್ಗೆ ಕಳೆದ ವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‍ಷಾ ಹಾಗೂ ರಕ್ಷಣಾ ಸಚಿವ ರಾಜ್‍ನಾಥ್‍ಸಿಂಗ್ ಅವರನ್ನು ಭೇಟಿ ಮಾಡಿ ಬಂದಿದ್ದರು.

ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ತುರ್ತಾಗಿ ಕನಿಷ್ಠ 5 ಸಾವಿರ ಕೋಟಿಯಾದರೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದರು.

Facebook Comments

Sri Raghav

Admin