ಕೊರೊನಾ ಸೋಂಕಿತರಾಗಿದ್ದ ಕೇಂದ್ರ ಸಚಿವ ಮೇಘ್‍ವಾಲ್ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.9- ಕೊರೊನಾ ಪಾಸಿಟಿವ್‍ನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಜಲಸಂಪನ್ಮೂಲ ಸಚಿವ ಅರ್ಜುನ್‍ರಾಮ್ ಮೇಘ್‍ವಾಲ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಮೇಘಾವಾಲ್, ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ನಾನು ಕೂಡ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು ಪಾಸಿಟಿವ್ ಬಂದ ಕಾರಣ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ, ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್‍ನ ಆರಂಭಿಕ ಟೆಸ್ಟ್‍ನಲ್ಲಿ ನೆಗೆಟಿವ್ ಬಂದಿತ್ತು, ಆದರೆ ಮತ್ತೊಮ್ಮೆ ಪರೀಕ್ಷೆಗೊಳಪಟ್ಟಾಗ ಪಾಸಿಟಿವ್ ಇರುವುದು ಗೊತ್ತಾಗಿದ್ದರಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ, ಆದ್ದರಿಂದ ನನ್ನ ಸಂಪರ್ಕದಲ್ಲಿದ್ದವರು ಕೂಡ ಪರೀಕ್ಷೆಗೆ ಒಳಪಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಅರ್ಜುನ್‍ರಾಮ್ ಮೇಘ್‍ವಾಲ್ ಅವರು ಬಾಭಿ ಜಿ ಪಪಾಡ್ ಎಂಬ ಹಪ್ಪಳ ಜಾಹೀರಾತನ್ನು ಬಿಡುಗಡೆ ಮಾಡಿ ಇದನ್ನು ತಿನ್ನುವುದರಿಂದ ಮಹಾಮಾರಿ ಕೊರೊನಾ ದೂರವಾಗುತ್ತದೆ ಎಂದು ಹೇಳುವ ದೃಶ್ಯವು ಅಂತರ್ಜಾಲದಲ್ಲಿ ಹರಿದಾಡುತ್ತಿತ್ತು, ಈಗ ಅವರೇ ಕೊರೊನಾ ಪಾಸಿಟಿವ್‍ಗೆ ಒಳಗಾಗಿದ್ದಾರೆ.

ಕೇಂದ್ರ ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ಕೂಡ ನಿನ್ನೆ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು ಅವರಿಗೂ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಜಸ್ಥಾನದ ಜೋದ್‍ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಮೆಂಡತ ಆಸ್ಪತ್ರೆಯಲ್ಲೇ ದಾಖಲಾಗಿದ್ದು ಅವರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. ಕೇಂದ್ರ ಸಚಿವ ಗಿರಿರಾಜ್‍ಸಿಂಗ್‍ಗೂ ಕೂಡ ಕೊರೊನಾ ಸೋಂಕು ಕಂಡುಬಂದಿರುವುದರಿಂದ ಸ್ವಯಂ ಕ್ವಾರಂಟೈನ್‍ಗೊಳಗಾಗಿದ್ದಾರೆ.

# ಇಬ್ಬರು ಅಸ್ಸಾಮ್ ಶಾಸಕರಿಗೂ ಕೊರೊನಾ:
ರಾಜಕೀಯ ನಾಯಕರನ್ನು ಬೆಂಬಿಡದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿಯು ಅಸ್ಸಾಮ್‍ನ ಇಬ್ಬರು ಶಾಸಕರನ್ನು ಬಾದಿಸುತ್ತಿದೆ. ಅಲ್ಗಾಪುರ್ ವಿಧಾನಸಭಾ ಕ್ಷೇತ್ರದ ಎಐಯುಡಿಎಫ್ ಶಾಸಕ ನೈಜಾಮುದ್ದೀನ್ ಚೌದರಿ ಹಾಗೂ ಅವರ ಕುಟುಂಬದ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದರೆ, ಉದರ್‍ಬಾಂಡ್ ಕ್ಷೇತ್ರದ ಬಿಜೆಪಿ ಶಾಸಕ ಮಿಹಾರ್ ಕಾಂತಿ ಸೋಮ್‍ಗೂ ವೈರಸ್ ಪಾಸಿಟಿವ್ ದೃಢವಾಗಿದೆ.

Facebook Comments

Sri Raghav

Admin