ಪಿಯುಸಿ ಮುಗಿಸಿದವರಿಗೆ ಯುಪಿಎಸ್‌ಸಿಯಲ್ಲಿ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

upsc

ಯೂನಿಯನ್ ಪಬ್ಲಿಕ್ ಸರ್ವಿಸ್ ಆಯೋಗದ 392 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 9 ನೇ ಜನವರಿ 2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. ಫೆಬ್ರವರಿ 4, 2019 ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಯೂನಿಯನ್ ಸಾರ್ವಜನಿಕ ಸೇವಾ ಆಯೋಗದಲ್ಲಿ ಖಾಲಿ ಇರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ನೌಕಾ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 12 ನೇ ತರಗತಿ ಪಾಸ್ ಅಥವಾ ರಾಜ್ಯ ಶಿಕ್ಷಣ ಮಂಡಳಿ ಅಥವಾ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದೊಂದಿಗೆ ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿದಾರರ ವಯಸ್ಸಿನ ಮಿತಿ ಅವಿವಾಹಿತ ಪುರುಷ ಅಭ್ಯರ್ಥಿಗಳು 2 ನೇ ಜುಲೈ 2000 ರಿಂದ 1 ಜುಲೈ 2003ರಲ್ಲಿ ಜನಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಅರ್ಜಿ ಶುಲ್ಕ ಎಸ್ಸಿ / ಎಸ್ಟಿ / ಮಹಿಳಾ / ಪಿಡಬ್ಲ್ಯೂಡಿ ಅರ್ಜಿದಾರರಿಗೆ ಶುಲ್ಕ ರೂ.ಉಚಿತ / -. ಇತರೆ ಅಭ್ಯರ್ಥಿಗಳಿಗೆ ರೂ. 100/ – ನಿಗದಿಪಡಿಸಲಾಗಿದೆ. ಪರೀಕ್ಷೆ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್  ಮೇಲೆ ಕ್ಲಿಕ್ ಮಾಡಿ. https://goo.gl/qTr7hH  / ಈ ಲಿಂಕ್ ಮೇಲೆ ಕ್ಲಿಕ್ಕಿಸಿ

Facebook Comments