ಅಮೆರಿಕದಲ್ಲಿ ಅಗೋಚರ ವೈರಸ್‌ಗೆ 1.13 ಲಕ್ಷ ಮಂದಿ ಬಲಿ, 19.88 ಲಕ್ಷ ಸೋಂಕಿತರು..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಜೂ. 7-ಕಿಲ್ಲರ್ ಕೋವಿಡ್-19 ವೈರಸ್ ಹೆಮ್ಮಾರಿ ದಾಳಿಯಿಂದ ತತ್ತರಿಸುತ್ತಿರುವ ಅಮೆರಿಕದಲ್ಲಿ ಮೃತರ ಸಂಖ್ಯೆ 1.13 ಲಕ್ಷ ಸನಿಹದಲ್ಲಿದ್ದು, ರೋಗ ಪೀಡಿತರ ಸಂಖ್ಯೆ 19.88 ಲಕ್ಷ ದಾಟಿದೆ.

ಅಗೋಚರ ವೈರಸ್ ವಿಶ್ವದ ಸೂಪರ್‍ ಪವರ್ ದೇಶವನ್ನು ಬೆಂಬಿಡದೇ ಕಾಡುತ್ತಿದ್ದು, ಸೋಂಕು ಮತ್ತು ಸಾವು ಪ್ರಮಾಣದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,12,296 ಮಂದಿ ಮೃತಪಟ್ಟಿದ್ದು, ನಾಳೆ ವೇಳೆಗೆ ಮರಣ ಪ್ರಮಾಣ 1.13 ಲಕ್ಷಕ್ಕೇರುವ ಸಾಧ್ಯತೆ ಇದೆ. ಅಲ್ಲದೇ ಈವರೆಗೆ 19,88,554 ಅಮೆರಿಕನ್ನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ.

ಇವರಲ್ಲಿ ಸುಮಾರು 17,100 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 7.52 ಲಕ್ಷ ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡು ಗುಣಮುಖರಾಗಿದ್ದಾರೆ.

ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಸಾಂಬಾ ರಾಷ್ಟ್ರದಲ್ಲಿ ಸುಮಾರು 6.76 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 36,044ಕ್ಕೇರಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ, ಸ್ಪೇನ್ ಮತ್ತು ಬ್ರಿಟನ್ ದೇಶಗಳಿವೆ.

Facebook Comments