ಅಮೆರಿಕದಲ್ಲಿ 63.89 ಲಕ್ಷ ಮಂದಿಗೆ ಕೋವಿಡ್ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ರಿಯೋ-ಡಿ-ಜನೈರೋ, ಸೆ.5-ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ವಿಶ್ವದಲ್ಲಿ ತೀವ್ರ ಬಾಧೆಗೆ ಒಳಗಾಗಿರುವ ಅಮೆರಿಕ ಅಗ್ರಸ್ಥಾನದಲ್ಲೇ ಮುಂದುವರಿದಿದೆ.  ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೃತರ ಸಂಖ್ಯೆ 1.92 ಲಕ್ಷ ದಾಟಿದೆ ಹಾಗೂ ರೋಗ ಪೀಡಿತರ ಪ್ರಮಾಣ 63.89 ಲಕ್ಷ ಮೀರಿದೆ.. ಅಲ್ಲದೇ ವಿಶ್ವದ ಸೂಪರ್ ಪವರ್ ರಾಷ್ಟ್ರದಲ್ಲಿ ಈಗಲೂ 25.61 ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿರುವುದು ಆತಂಕದ ಸಂಗತಿ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,92,111 ಮಂದಿ ಮೃತಪಟ್ಟಿದ್ದು, 63,89,057 ಜನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ. ಇವರಲ್ಲಿ ಸುಮಾರು 15,000ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ. ಅಮೆರಿಕದಲ್ಲಿ ಈವರೆಗೆ ಸುಮಾರು 36,35,854 ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡಿದ್ದಾರೆ/ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಈಗಲೂ 25,61,093 ಸಕ್ರಿಯ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿಯಾಗಿದೆ. ಸಾವು ಮತ್ತು ಸೋಂಕಿನಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಸಾಂಬಾ ನಾಡಿಯಲ್ಲಿ ಮೃತರ ಸಂಖ್ಯೆ 1.25 ಲಕ್ಷ ದಾಟಿದ್ದು, 40.91 ಲಕ್ಷಕ್ಕೂ ಅದಿಕ ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ.

ಅಧಿಕೃತ ಮಾಹಿತಿ ಪ್ರಕಾರ ಬ್ರೆಜಿಲ್‍ನಲ್ಲಿ ಈವರೆಗೆ 1,25,584 ಮಂದಿಯನ್ನು ಹೆಮ್ಮಾರಿ ಬಲಿ ತೆಗೆದುಕೊಂಡಿದೆ. ಅಲ್ಲಿ ಈಗಲೂ 40,91,808 ಮಂದಿ ಮಾರಕ ಸೋಂಕಿನಿಂದ ನರಳುತ್ತಿದ್ದಾರೆ.  ಅಮೆರಿಕ ಮತ್ತು ಬ್ರೆಜಿಲ್ ನಂತರದ ಸ್ಥಾನಗಳಲ್ಲಿ ಭಾರತ, ರಷ್ಯಾ, ಮತ್ತು ಪೆರು ದೇಶಗಳಿವೆ.

Facebook Comments