ಅಪರಿಚಿತ ವ್ಯಕ್ತಿಯ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಡಿ.2- ಪೊದೆಯೊಂದರ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ. ಶಿರಾ ತಾಲ್ಲೂಕಿನ ತಾವರಕೆರೆ ಬಳಿಯ ಮೊಸರುಕುಂಟೆ ಗ್ರಾಮದ ಹೊರಭಾಗದ ಪೊದೆಯೊಂದರ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಇಂದು ಬೆಳಗ್ಗೆ ಮೊಸರುಕುಂಟೆ ಗ್ರಾಮದವರು ಈ ಮಾರ್ಗವಾಗಿ ಹೋಗುತ್ತಿದ್ದಾಗ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ನಾಯಿ ಸತ್ತಿರಬಹುದೆಂದು ಭಾವಿಸಿದ್ದರು.  ಈ ವೇಳೆ ವ್ಯಕ್ತಿಯೊಬ್ಬರು ಪೊದೆ ಬಳಿ ಹೋಗಿ ನೋಡಿದಾಗ ಸುಮಾರು 45 ವರ್ಷದ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿರುವುದನ್ನು ಕಂಡು ಊರಿನ ಜನರಿಗೆ ತಿಳಿಸಿದ್ದಾರೆ. ಕೂಡಲೇ ಗ್ರಾಮಸ್ಥರು ತಾವರೆಕೆರೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಸಬ್‍ಇನ್‍ಸ್ಪೆಕ್ಟರ್ ಮಹಾಲಕ್ಷ್ಮಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೃತ ವ್ಯಕ್ತಿಯ ತಲೆ ಹಾಗೂ ಕುತ್ತಿಗೆಯನ್ನು ಕಾಡು ಪ್ರಾಣಿಗಳು ತಿಂದಿದ್ದು, ಈ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಶಿರಾ ಗ್ರಾಮಾಂತರ ಡಿವೈಎಸ್ಪಿ ಕುಮಾರಪ್ಪ, ವೃತ್ತ ನಿರೀಕ್ಷಕ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತನ ಪತ್ತೆಗೆ ಹಾಗೂ ವಾರಸುದಾರರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Facebook Comments