ಮನೆಯ ಮೇಲ್ಛಾವಣಿ ಕುಸಿದು ಮೂರು ಮಕ್ಕಳ ಸಾವು, 8 ಮಂದಿ ಸ್ಥಿತಿ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಫತೇಪುರ(ಉತ್ತರ ಪ್ರದೇಶ)- ಬಿಂಡ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕಚ್ಚಾ ಮನೆಯ ಮೇಲ್ಛಾವಣಿ ಕುಸಿದು 11 ಮಂದಿಯ ಮೇಲೆ ಬಿದ್ದಿದೆ.

ಮನೆ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸಾವು, 8 ಜನರ ಸ್ಥಿತಿ ಗಂಭೀರಮೇಲ್ಛಾವಣಿ ಕುಸಿದು 9 ಮಕ್ಕಳು ಮತ್ತು ಇಬ್ಬರು ಮಹಿಳೆಯರು ಅವಶೇಷಗಳಡಿ ಸಿಲುಕಿದ್ದರು.

ಅವರನ್ನು ಗ್ರಾಮಸ್ಥರು ಹೊರಗೆ ತೆಗೆದು ಆ್ಯಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಲ್ಲಿ ಮೂವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 6 ಮಕ್ಕಳು ಸೇರಿದಂತೆ ಇಬ್ಬರು ಮಹಿಳೆಯರ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹೃದಯ ವಿದ್ರಾವಕ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು, ಇಡೀ ಗ್ರಾಮದಲ್ಲೇ ಸ್ಮಶಾನ ಮೌನ ಆವರಿಸಿದೆ.ಮಾಹಿತಿ ತಲುಪುತ್ತಿದ್ದಂತೆ ಪೊಲೀಸರು ಮೂವರು ಮಕ್ಕಳ ಶವಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin