ಭೂವಿವಾದ : ಯೋಧನ ತಂದೆ ಹತ್ಯೆ, ಗರ್ಭಿಣಿ ಮೇಲೆ ಮಾರಣಾಂತಿಕ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.22- ಭೂ ವಿವಾದದ ಹಿನ್ನಲೆಯಲ್ಲಿ ಭಾರತೀಯ ಸೇನಾ ಯೋಧನ ತಂದೆಯನ್ನು ಭೀಕರವಾಗಿ ಕೊಲೆ ಮಾಡಿ ಯೋಧನ ಗರ್ಭಿಣಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಜಮ್ಮು ಕಾಶ್ಮೀರದಲ್ಲಿ ಯೋಧನಾಗಿರುವ ಸೂರ್ಯಪ್ರಕಾಶ್ ಅವರ ತಂದೆ ಭೀಕರವಾಗಿ ಕೊಲೆಯಾಗಿರುವ ವ್ಯಕ್ತಿ.

ಅಮೇಥಿಯ ಥೇಂಗಾ ಶುಕುಲ್‍ಪುರದಲ್ಲಿ ವಾಸವಾಗಿದ್ದ ಯೋಧನ ತಂದೆ ರಾಜೇಂದ್ರ ಮಿಶ್ರಾ ಅವರನ್ನು ಭೂ ವಿವಾದದ ಹಿನ್ನಲೆಯಲ್ಲಿ ನೆರೆಮನೆಯಾತ ಅಶೋಕ್ ಶುಕ್ಲಾ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.

ಮಾತ್ರವಲ್ಲ ಗರ್ಭಿಣಿಯಾಗಿರುವ ಯೋಧನ ಪತ್ನಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಮತ್ತು ಆತನ ಸಹಚರರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

Facebook Comments

Sri Raghav

Admin