ಇಬ್ಬರು ಕುಖ್ಯಾತ ಕ್ರಿಮಿನಲ್‍ಗಳು ಎನ್‌ಕೌಂಟರ್‌ನಲ್ಲಿ ಫಿನಿಶ್

ಈ ಸುದ್ದಿಯನ್ನು ಶೇರ್ ಮಾಡಿ

ಮುಜಾಫರ್‍ನಗರ,ಜು.16- ದೇಶದ ಕ್ರೈಂ ಸಿಟಿ ಎಂದೇ ಕುಖ್ಯಾತಿ ಪಡೆಯುತ್ತಿರುವ ಉತ್ತರಪ್ರದೇಶದ ಮುಜಾಫರ್‍ನಗರದಲ್ಲಿ ಇಬ್ಬರು ಕುಪ್ರಸಿದ್ಧ ಕ್ರಿಮಿನಲ್‍ಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.

ಲೂಟಿ, ಕೊಲೆ-ಸೂಲಿಗೆ ಸೇರಿದಂತೆ ಹಲವಾರು ಪ್ರಕರಣದಲ್ಲಿ ಪೊಲೀಸರಿಗೆ ಅಗತ್ಯವಾಗಿ ಬೇಕಿದ್ದ ರೋಹಿತ್ ಅಲಿಯಾಸ್ ಸಂದು ಮತ್ತು ರಾಕೇಶ್ ಎನ್‍ಕೌಂಟರ್‍ನಲ್ಲಿ ಹತರಾದ ಕುಖ್ಯಾತ ಕೇಡಿಗಳು. ಹತರಾದ ಕ್ರಿಮಿನಲ್‍ಗಳ ಬಳಿಯಿದ್ದ ಪಿಸ್ತೂಲ್, ಕಾಟ್ರಿಜ್‍ಗಳು ಮತ್ತು ಮೋಟರ್‍ಸೈಕಲ್‍ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ರೋಹಿತ್ ಮತ್ತು ರಾಕೇಶ್ ತಲೆಗೆ ಅನುಕ್ರಮವಾಗಿ 1ಲಕ್ಷ ರೂ. ಮತ್ತು 50ಸಾವಿರ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಇವರಿಬ್ಬರು ಮುಜಾಫರ್‍ನಗರದ ನ್ಯೂಮಂಡಿ ಪ್ರದೇಶಕ್ಕೆ ಬರುವ ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆಗೆ ಇಳಿದಾಗ ಗುಂಡಿನ ಚಕಮಕಿ ನಡೆಯಿತು.

ಎನ್‍ಕೌಂಟರ್‍ನಲ್ಲಿ ರೋಹಿತ್ ಮತ್ತು ರಾಕೇಶ್ ಹತರಾದರೆಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತಕುಮಾರ್ ತಿಳಿಸಿದ್ದಾರೆ.

Facebook Comments