ಉತ್ತರಪ್ರದೇಶದ ಆರೋಗ್ಯ ಸಚಿವರಿಗೂ ಕೊರೋನಾ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಆ.18- ಕೊರೊನಾ ವೈರಸ್ ಸೋಂಕು ಕೇಂದ್ರ ಸಚಿವರು , ಕೆಲ ರಾಜ್ಯಗಳ ಮುಖ್ಯಮಂತ್ರಿ ಗಳನ್ನು ಮತ್ತು ಸಚಿವರನ್ನು ಕಾಡುತ್ತಲೇ ಇದೆ. ಉತ್ತರಪ್ರದೇಶದ ಆರೋಗ್ಯ ಖಾತೆ ರಾಜ್ಯ ಸಚಿವ ಅತುಲ್ ಗರ್ಗ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಇಂದು ಬೆಳಗ್ಗೆ ಈ ಕುರಿತು ಟ್ವೀಟ್ ಮಾಡಿರುವ ಸಚಿವರು ತಮಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಪ್ರಸ್ತುತ ನಾನು ಪ್ರತ್ಯೇಕವಾಗಿದ್ದು , ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ತಮ್ಮ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅತುಲ್ ಗರ್ಗ್ ಸಲಹೆ ಮಾಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂಪುಟ ದಲ್ಲಿ ತಾಂತ್ರಿಕ ಶಿಕ್ಷಣ ಸಚಿವೆಯಾಗಿದ್ದ ಕಮಲರಾಣಿ ವರುಣ್ (60) ಆ.2ರಂದು ಕಿಲ್ಲರ್ ಕೊರೊನಾ ರೋಗಕ್ಕೆ ಬಲಿಯಾಗಿದ್ದರು.

Facebook Comments

Sri Raghav

Admin