ಯೋಗಿ ಆದಿತ್ಯನಾಥ್ ಸಂಪುಟದಿಂದ ಸಚಿವ ರಾಜ್‍ಭರ್ ಕಿಕ್ ಔಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಮೇ 20-ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಎಸ್‍ಬಿಎಸ್‍ಪಿ ನಾಯಕ ಮತ್ತು ಸಚಿವ ಓಂ ಪ್ರಕಾಶ್ ರಾಜ್‍ಭರ್ ಅವರನ್ನು ಉತ್ತರ ಪ್ರದೇಶ ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ.

ಈ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಓಂ ಪ್ರಕಾಶ್‍ರನ್ನು ಮಂತ್ರಿ ಮಂಡಲದಿಂದ ತಕ್ಷಣ ತೆಗೆದು ಹಾಕುವಂತೆ ರಾಜ್ಯಪಾಲ ರಾಮ್ ನಾಯಕ್ ಅಂಗೀಕರಿಸಿದ್ದಾರೆ. ಇದರೊಂದಿಗೆ ಸಚಿವರು ತಮ್ಮ ವಿವಾದಾತ್ಮಕ ಹೇಳಿಕೆಗೆ ತಲೆ ದಂಡ ತೆತ್ತಿದ್ದಾರೆ.

ಸುಹೇಲ್‍ದೇವ್ ಭಾರತೀಯ ಸಮಾಜ ಪಾರ್ಟಿ(ಎಸ್‍ಬಿಎಸ್‍ಪಿ) ಹಿರಿಯ ನಾಯಕ ಹಾಗೂ ಹಿಂದುಳಿದ ವರ್ಗಗಳ ಮತ್ತು ದಿವ್ಯಾಂಗರ ಕಲ್ಯಾಣ ಖಾತೆ ಸಚಿವ ಓಂ ಪ್ರಕಾಶ್ ರಾಜ್‍ಭರ್ ಇತ್ತೀಚೆಗೆ ಎನ್‍ಡಿಎ ಪ್ರಮುಖ ಪಕ್ಷ ಬಿಜೆಪಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದರು.

ಲೋಕಸಭಾ ಚುನಾವಣೆ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ್ದ ಅವರು ಬಿಜೆಪಿ ಮಂದಿಗೆ ಚಪ್ಪಲಿ-ಶೂಗಳಿಂದ ಹೊಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಅಲ್ಲದೇ ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದು ತಾನು ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದರು.  ಸಚಿವರ ಪ್ರಚೋದನಾಕಾರಿ ಹೇಳಿಕೆಯಿಂದ ಕುಪಿತಗೊಂಡಿದ್ದ ಯೋಗಿ ಆದಿತ್ಯನಾಥ ಅವರು ಓಂ ಪ್ರಕಾಶ್‍ರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.

ಇಂದು ಬೆಳಗ್ಗೆ ರಾಮ್‍ನಾಯಕ್ ಮುಖ್ಯಮಂತ್ರಿ ಅವರ ಶಿಫಾರಸು ಅಂಗೀಕರಿಸಿದ್ದಾರೆ. ಓಂ ಪ್ರಕಾಶ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೂಚನೆಯನ್ನು ಧಿಕ್ಕರಿಸಿ ತಮ್ಮ ಪಕ್ಷದ ಅನೇಕ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು ಹಾಗೂ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಎಸ್‍ಪಿ-ಬಿಎಸ್‍ಪಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು.

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಎಸ್‍ಬಿಎಸ್‍ಪಿ ಪಕ್ಷದ ಮುಖಂಡರು ತೀವ್ರ ಅಸಮಾಧಾನಗೊಂಡಿದ್ದಾರೆ. ಬಿಜೆಪಿ-ಎಸ್‍ಬಿಎಸ್‍ಪಿ ಸಂಬಂಧ ಮುರಿದು ಬಿದ್ದಂತಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ