ಮುಂದಿನ ವಾರ ರಾಜ್ಯ ಸಂಪುಟದಲ್ಲಿ ಅನುಮೋದನೆಯಾಗಲಿದೆ 10% ಮೇಲ್ಜಾತಿ ಮೀಸಲಾತಿ ಕಾಯ್ದೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.1-ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಉದ್ಯೋಗ ಮತ್ತು ಸರ್ಕಾರಿ ಸೇವೆಗಳಲ್ಲಿ ಶೇ. 10ರಷ್ಟು ಮೀಸಲಾತಿ ನೀಡುವ ಕೇಂದ್ರದ ಕಾಯ್ದೆಯನ್ನು ಕಾಯ್ದೆಯನ್ನು ರಾಜ್ಯ ಸರ್ಕಾರ ಮುಂದಿನ ವಾರ ಸಂಪುಟದಲ್ಲಿ ಅನುಮೋದಿಸಲಿದೆ.

ಮುಂದಿನ ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ.

ಒಂದು ವೇಳೆ ಕಾಯ್ದೆ ಜಾರಿಯಾದರೆ ಬ್ರಾಹ್ಮಣರು, ವೈಶ್ಯರು, ಮೊದಲಿಯರು, ನಾಯರ್ ಸೇರಿದಂತೆ ಮತ್ತಿತರ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.10ರಷ್ಟು ಮೀಸಲಾತಿ ಸೌಲಭ್ಯ ಪಡೆಯಲಿದ್ದಾರೆ.

ವಾರ್ಷಿಕವಾಗಿ 8 ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುವ ಮೇಲ್ವರ್ಗದವರಿಗೆ ಈ ಕಾಯ್ದೆಯೂ ಅನುಕೂಲವಾಗಲಿದೆ. ಈಗಾಗಲೇ ಕಂದಾಯ ಇಲಾಖೆ ಮೂಲಕ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಸೀಲ್ದಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ಜಾತಿ ಮತ್ತು ವರಮಾನ ಪ್ರಮಾಣ ಪತ್ರ ನೀಡಲು ಕಾರ್ಯೋನ್ಮುಖರಾಗುವಂತೆ ಸೂಚನೆ ಕೊಡಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಕಾಯ್ದೆಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಿಕೊಟ್ಟಿದ್ದು, ಬಳಿಕ ಸಂಪುಟದಲ್ಲಿ ಚರ್ಚೆ ಮಾಡಿದ ನಂತರ ಕಾರ್ಯರೂಪಕ್ಕೆ ಜಾರಿಗೆ ಬರಲಿದೆ.

ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಕಾಯ್ದೆಯನ್ನು ಸಂಪುಟದ ಕಾರ್ಯ ಕಲಾಪಗಳ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಹಿಂದೆಯೇ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ಆದರೆ ಕೆಲವು ಕಾರಣಗಳಿಂದ ಇದನ್ನು ಅನುಷ್ಟಾನಗೊಳಿಸಲು ಸಾಧ್ಯವಾಗಿರಲಿಲ್ಲ. ಮೇಲ್ವರ್ಗದ ಸಮುದಾಯಗಳಿಗೆ ಶೇ.10ರಷ್ಟು ಮೀಸಲಾತಿ ನೀಡಿದರೂ ಹಾಲಿ ಇರುವ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗುವುದಿಲ್ಲ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದಕ್ಕೆ ಎಲ್ಲಿಯೂ ಕೂಡ ಧಕ್ಕೆಯಾಗದ ರೀತಿಯಲ್ಲಿ ಸರ್ಕಾರ ಕೇಂದ್ರದ ಕಾಯ್ದೆಯನ್ನು ಅನುಷ್ಠಾನ ಮಾಡಲಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಸಂಬಂಧ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಿದ್ದರು. ಬಳಿಕ ಸಂಸತ್‍ನಲ್ಲಿ ಇದನ್ನು ಬಹುಮತದಿಂದ ಅಂಗೀಕರಿಲಾಗಿತ್ತು. ಬಳಿಕ ರಾಷ್ಟ್ರಪತಿಗಳು ಇದಕ್ಕೆ ಅಂಕಿತ ಹಾಕಿದ್ದರು.

ಫೆಬ್ರವರಿ 1ರಿಂದಲೇ ದೇಶಾದ್ಯಂತ ಈ ಕಾಯ್ದೆಯನ್ನು ಜಾರಿ ಮಾಡುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ರಾಜ್ಯ ಸರ್ಕಾರಗಳು ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿದೆ.

ಸಂವಿಧಾನದ 124ನೇ ತಿದ್ದುಪಡಿಯ ಪ್ರಕಾರ ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಶೇ. 10 ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಜ. 9ರಂದು ಅನುಮೋದಿಸಲಾಗಿತ್ತು. ಅದರನ್ವಯ ನೂತನ ಮೀಸಲಾತಿ ತಿದ್ದುಪಡಿ ಕಾಯ್ದೆ ಫೆ. 1ರಿಂದ ಜಾರಿಯಾಗಿದೆ.

ಫೆ. 1ರಿಂದ ಕೇಂದ್ರ ಸರಕಾರ ಹೊರಡಿಸುವ ಎಲ್ಲ ವಿಧದ ನೇಮಕಾತಿ ಮತ್ತು ಸೇವೆಗಳಲ್ಲಿ ಶೇ. 10 ಮೀಸಲಾತಿ ದೊರೆಯಲಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ನೇಮಕಾತಿ ಸಚಿವಾಲಯ ವಿಶೇಷ ಸೂಚನೆಯನ್ನು ಎಲ್ಲ ಸಂಬಂಧಿತ ಇಲಾಖೆಗಳಿಗೂ ಕಳುಹಿಸಿತ್ತು.

ಸಂವಿಧಾನದ 124ನೇ ತಿದ್ದುಪಡಿಯ ಪ್ರಕಾರ ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಶೇ. 10 ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಜ. 9ರಂದು ಅನುಮೋದಿಸಲಾಗಿತ್ತು. ಅದರನ್ವಯ ನೂತನ ಮೀಸಲಾತಿ ತಿದ್ದುಪಡಿ ಕಾಯ್ದೆ ಫೆ. 1ರಿಂದ ಜಾರಿಗೆ ಬಂದಿದೆ.

ನೂತನ ಮೀಸಲಾತಿ ಕಾಯ್ದೆಯನ್ವಯ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ಕಾಯ್ದೆಯಲ್ಲಿ ಬರುವ ಪರಿಶಿಷ್ಟ ಜಾತಿ, ಪಂಗಡ, ಆರ್ಥಿಕವಾಗಿ ಹಿಂದುಳಿದ ಮತ್ತು ಮೀಸಲಾತಿಯಡಿ ಒಳಗೊಳ್ಳದ ವರ್ಗಗಳ, 8 ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬದವರು ಇದರ ಪ್ರಯೋಜನ ಪಡೆಯಲಿದ್ದಾರೆ.

ಮೇಲ್ವರ್ಗದವರಿಗೂ ಮೀಸಲಾತಿ ಪ್ರಯೋಜನ ದೊರೆಯುತ್ತಿರುವುದರಿಂದ, ಉದ್ಯೋಗ ಗಿಟ್ಟಿಸಲು ಅನುಕೂಲವಾಗಲಿದೆ.

Facebook Comments

Sri Raghav

Admin