ಯುಪಿಎಸ್‍ಸಿ ಸಂದರ್ಶನ ಎದುರಿಸುವವರಿಗೆ ರವಿ ಚನ್ನಣ್ಣನವರ್ ತಂಡದಿಂದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.4- ನವೋದಯ ಫೌಂಡೇಷನ್ ಮತ್ತು ಎಸ್-ಯುಪಿಎಸ್‍ಸಿ ಸಂಸ್ಥೆ ಸಹಯೋಗದಲ್ಲಿ ಫೆ.9ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಅರ್ಹರಾದ ವಿದ್ಯಾರ್ಥಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಅವರ ನೇತೃತ್ವದಲ್ಲಿ ಅಣುಕು ಸಂದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳು ಸಂದರ್ಶನದಲ್ಲಿ ಹೇಗೆ ಪಾಲ್ಗೊಳ್ಳಬೇಕು ಮತ್ತು ಹೇಗೆ ಎಂಬುದರ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ರವಿ ಚನ್ನಣ್ಣನವರ್ ಜತೆಗೆ ಐಇಎಸ್ ಅಧಿಕಾರಿ ಗೋಪಿನಾಥ್ ಮತ್ತು ಐಎಎಸ್‍ಅಧಿಕಾರಿ ಮುತ್ತಯ್ಯ ಮುಲಿಯಾನ್ ಮತ್ತು ಗುರುದತ್ ಹೆಗಡೆ ,ರಾಜೇಂದ್ರ ಮತ್ತು ಪತ್ರಕರ್ತರಾದ ಸಂದೀಪ್ ಮಹಾಜನ್ ಮತ್ತು ರವೀಂದ್ರ ಭಟ್ ಅವರು ಇರಲಿದ್ದಾರೆ.

ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಇ ಮೇಲ್ , ವಿಳಾಸ upsc2019@gmail.com ಅಥವಾ ವ್ಯಾಟ್ಸ್ ಅಪ್ ಮೊಬೈಲ್ ಸಂಖ್ಯೆ :9880122511ಗೆ ಡಿಎಎಫ್ ಅಪ್‍ಲೋಡ್ ಮಾಡಬೇಕು. ಸಂದರ್ಶನ ನಡೆಯುವ ಸ್ಥಳ ನಂ.906/ಸಿ/49/3 , ಶಿವ ಕಾಂಪ್ಲೆಕ್ಸ್, ಮೂರನೆ ಮಹಡಿ , 6ನೆ ಮುಖ್ಯರಸ್ತೆ, ವಿಜಯನಗರ ಬೆಂಗಳೂರು -40. ಹೆಚ್ಚಿನ ಮಾಹಿತಿಗಾಗಿ 9880133288 ಅಥವಾ 9880122511 ಸಂಪರ್ಕಿಸಲು ಕೋರಲಾಗಿದೆ.

Facebook Comments