ಯುಪಿಎಸ್‍ಸಿ ಮುಖ್ಯ ಪರೀಕ್ಷಾ ಫಲಿತಾಂಶ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.15- ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‍ಸಿ) ನಡೆಸಿದ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಫೆ.27ರಂದು ನಡೆಯುವ ಮುಂದಿನ ಹಂತದ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ 20ರಿಂದ 29ರವರೆಗೆ ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ಪೊಲೀಸ್ ಸೇವೆ(ಐಪಿಎಸ್), ಭಾರತೀಯ ವಿದೇಶಿ ಸೇವೆ(ಐಎಫ್‍ಎಸ್), ಭಾರತೀಯ ಅರಣ್ಯಸೇವೆ(ಐಎಫ್‍ಎಸ್) ಹಾಗೂ ಭಾರತೀಯ ಅಂಚೆ ಸೇವೆ( ಐಪಿಎಸ್) ಸೇರಿದಂತೆ ಕೆಲವು ಪ್ರಮುಖ ಹುದ್ದೆಗಳಿಗೆ ಲಿಖಿತ ಮತ್ತು ವ್ಯಕ್ತಿತ್ವ ಪರೀಕ್ಷೆ ನಡೆಸಲಾಗಿತ್ತು.

ಯುಪಿಎಸ್‍ಸಿ ವೆಬ್‍ಸೈಟ್‍ನಲ್ಲಿ ಮುಖ್ಯ ಪರೀಕ್ಷೆ 2019 ಫಲಿತಾಂಶ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಪಿಡಿಎಫ್ ನಮೂನೆಯಲ್ಲಿ ಫಲಿತಾಂಶದ ವಿವರಗಳನ್ನು ಡೌನ್‍ಲೌಡ್ ಮಾಡಿಕೊಳ್ಳಬಹುದು. ಫೆ.27ರಂದು ಮುಂದಿನ ಹಂತದ ಸಂದರ್ಶನ ನಡೆಯಲಿದೆ.

Facebook Comments

Sri Raghav

Admin