ಬಿಎಸ್ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಬಿಯಲ್ಲಿ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಯೂನಿಯನ್ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ) ನಲ್ಲಿ ಖಾಲಿ ಇರುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಪಿಎಫ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 24.04.2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 20.05.2019 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಸಶಸ್ತ್ರ ಪೊಲೀಸ್ ಪಡೆ (ಸಿಪಿಎಫ್) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಇನ್ಸ್ಟಿಟ್ಯೂಟ್ನಿಂದ ಗ್ರಾಜುಯೇಟ್, ಸ್ನಾತಕೋತ್ತರ ಪದವಿ ಅಥವಾ ಸಮರ್ಪಕ ಪದವಿಯ ವಿದ್ಯಾರ್ಹತೆ ಪಡೆದಿರಬೇಕು.

20 ರಿಂದ 25 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಅರ್ಜಿ ಶುಲ್ಕ ಎಸ್ಸಿ / ಎಸ್ಟಿ / ಮಹಿಳಾ / ಮಾಜಿ ಸರ್ಕಾರಿ / ಅಲ್ಪಸಂಖ್ಯಾತರು / ಆರ್ಥಿಕ ಹಿಂದುಳಿದ ವರ್ಗಗಳಿಗೆ ರೂ. ವಿನಾಯಿತಿ / –ಇತರೆ ಅಭ್ಯರ್ಥಿಗಳಿಗೆ ರೂ. 200 / – ನಿಗದಿಪಡಿಸಲಾಗಿದೆ.

ಬರೆಯುವ ಪರೀಕ್ಷೆ, ಶಾರೀರಿಕ ದಕ್ಷತೆ ಪರೀಕ್ಷೆ / ದೈಹಿಕ ಪರೀಕ್ಷೆ, ವೈದ್ಯಕೀಯ ಗುಣಮಟ್ಟ ಪರೀಕ್ಷೆ, ಸಂದರ್ಶನ / ವ್ಯಕ್ತಿತ್ವ ಪರೀಕ್ಷೆ ಮತ್ತು ಅಂತಿಮ ಆಯ್ಕೆ / ಅರ್ಹತೆಯ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ: https://upsc.gov.in/sites/default/files/Notice-CAPF-2019-Engl.pdf

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ