ಪಾಕ್‍ನ ಐತಿಹಾಸಿಕ ಗುರುನಾನಕ್ ಅರಮನೆ ದುಷ್ಕರ್ಮಿಗಳಿಂದ ಧ್ವಂಸ..!

ಈ ಸುದ್ದಿಯನ್ನು ಶೇರ್ ಮಾಡಿ

ಲಾಹೋರ್, ಮೇ 27- ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಐತಿಹಾಸಿಕ ಬಾಬಾ ಗುರುನಾನಕ್ ಅರಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಬೆಲೆಬಾಳುವ ಬಾಗಿಲುಗಳು ಮತ್ತು ಕಿಟಕಿಗಳನ್ನು ಮಾರಾಟ ಮಾಡಿದ್ದಾರೆ. ಈ ಘಟನೆ ಬಗ್ಗೆ ಸಿಖ್ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪಾಕಿಸ್ತಾನದ ಪ್ರಾಂತ್ಯ ರಾಜ್ಯಧಾನಿ ಲಾಹೋರ್‍ನಿಂದ 100 ಕಿ.ಮೀ. ದೂರುವಿರುವ ನವೋಲಿ ಪಟ್ಟಣದ ಗ್ರಾಮದಲ್ಲಿನ ಪುರಾತನ ಗುರುನಾನಕ್ ಅರಮನೆಯನ್ನು ಸ್ಥಳೀಯ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ಸುಮಾರು 400ವರ್ಷಗಳ ಹಿಂದೆ ನಿರ್ಮಿಸಲಾದ 4 ಅಂತಸ್ತುಗಳ ಈ ಪ್ರಾಚೀನ ಅರಮನೆಯ ಗೋಡೆಗಳಲ್ಲಿ ಸಿಖ್ ಧರ್ಮಗುರು ಗುರುನಾನಕ್, ಹಿಂದೂ ರಾಜಾಮಹಾರಾಜರುಗಳ ಚಿತ್ರಗಳಿದ್ದವು. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿರುವ ಸಿಖ್ ಸಮುದಾಯದವರು ಅರಮನೆಗೆ ಆಗಾಗ ಭೇಟಿ ನೀಡುತ್ತಿದ್ದರು.

ಈ ಅರಮನೆಯಲ್ಲಿ ಒಟ್ಟು 16 ವಿಶಾಲ ಕೊಠಡಿಗಳಿವೆ. ಒಂದೊಂದು ಕೊಠಡಿಯಲ್ಲಿ ಮೂರು ಬಾಗಿಲುಗಳು ಮತ್ತು ನಾಲ್ಕು ಕಿಟಕಿ (ಗವಾಕ್ಷಿ)ಗಳಿವೆ. ಸ್ಥಳೀಯ ಮುಖಂಡನೊಬ್ಬನ ಕುಮ್ಮಕ್ಕಿನಿಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅತ್ಯಂತ ಬೆಲೆ ಬಾಳುವ ತೇಗದ ಮರದಿಂದ ನಿರ್ಮಿಸಲಾದ ಬಾಗಿಲುಗಳು, ಕಿಟಕಿಗಳು ಮತ್ತು ಗವಾಕ್ಷಿಗಳನ್ನು ಕಿಡಿಗೇಡಿಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆಂದು ವರದಿಯಾಗಿದೆ.

ದುಷ್ಕರ್ಮಿಗಳ ಈ ಕೃತ್ಯದ ಬಗ್ಗೆ ಸಿಖ್ ಮತ್ತು ಹಿಂದೂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ