ಭಾರತಕ್ಕೆ 155 ದಶಲಕ್ಷ ಕ್ಷಿಪಣಿ, ಟಾರ್ಪೆಡೋ ಮಾರಾಟಕ್ಕೆ ಅಮೆರಿಕ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಏ.14-ಭಾರತಕ್ಕೆ 155 ದಶಲಕ್ಷ ಮೊತ್ತದ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಟಾರ್ಪೆಡೋಗಳನ್ನು (ನೌಕಾ ಧ್ವಂಸಕ) ಮಾರಾಟ ಮಾಡಲು ಅಮೆರಿಕ ಸಮ್ಮತಿಸಿದೆ.  ಭೂಮಿಯಿಂದ ಗಗನಕ್ಕೆ ಚಿಮ್ಮುವ ಹರ್ಪೂನ್ ಕ್ಷಿಪಣಿಗಳು ಮತ್ತು ಹಗುರ ತೂಕ ಟಾರ್ಪೆಡೋಗಳನ್ನು (ಯುದ್ಧ ನೌಕೆ, ಸಬ್‍ಮರೀನ್ ಇತ್ಯಾದಿ ಧ್ವಂಸಕ) ಭಾರತಕ್ಕೆ ಮಾರಾಟ ಮಾಡುವ ತನ್ನ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಅಧಿಸೂಚನೆ ಮೂಲಕ ತಿಳಿಸಿದೆ.

ಇವುಗಳ ಒಟ್ಟು ಮೌಲ್ಯ 155 ದಶಲಕ್ಷ ಡಾಲರ್ (ಸುಮಾರು 12 ಸಾವಿರ ಕೋಟಿ). 92 ದಶಲಕ್ಷ ಡಾಲರ್ ವೆಚ್ಚದ ಎಜಿಎಂ-84ಎಲ್ ಹರ್ಪೂನ್ ಬ್ಲಾಕ್-2 ಏರ್ ಲಾಂಚ್ ಮಿಸೈಲ್‍ಗಳು ಹಾಗೂ 63 ದಶಲಕ್ಷ ಡಾಲರ್ ಮೌಲ್ಯದ 16 ಎಂಕೆ-56 ಎಲ್ ಅಪ್ ರೌಂಡ್ ಲೈಟ್‍ವೈಟ್ ಟಾರ್ಪೆಡೋಗಳು ಮತ್ತು ಮೂರು ಎಂಕೆ ಎಕ್ಸೈಸ್ ಟಾರ್ಪೆಡೋಗಳನ್ನು ಭಾರತಕ್ಕೆ ಮಾರಾಟ ಮಾಡಲಾಗುವುದು ಎಂದು ರಕ್ಷಣಾ ಭದ್ರತೆ ಸಹಕಾರ ಸಂಸ್ಥೆ ಅಧಿಸೂಚನೆಯಲ್ಲಿ ತಿಳಿಸಿದೆ.

ಭಾರತ ಸರ್ಕಾರವು ಹಿಂದೆ ಈ ಎರಡು ಮಿಲಿಟರಿ ಹಾರ್ಡ್‍ವೇರ್‍ಗಳಿಗೆ ಮನವಿ ಮಾಡಿತ್ತು. ಅದನ್ನು ಪರಿಗಣಿಸಿ ಇವುಗಳನ್ನು ಮಾರಾಟ ಮಾಡಲು ಸಮ್ಮತಿಸಲಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ತಿಳಿಸಿದೆ.

ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗುತ್ತಿರುವ ರಕ್ಷಣಾ ಆತಂಕಗಳ ಹಿನ್ನೆಲೆಯಲ್ಲಿ ಭಾರತ ತನ್ನ ಪ್ರದೇಶಗಳ ಭಧ್ರತೆ ಮತ್ತು ವೈರಿಗಳ ಅತಿಕ್ರಮಣ ನಿಯಂತ್ರಣದ ಉದ್ದೇಶದಿಂದ ಈ ಎರಡು ಪ್ರಬಲ ಶಸ್ತ್ರಾಸ್ತ್ರಗಳನ್ನು ಹೊಂದಲಿದೆ.

Facebook Comments

Sri Raghav

Admin