ಭಾರತೀಯ ಪುರಾತನ ಆಯುರ್ವೇದ ಔಷಧಿ ಅಮೆರಿಕದಲ್ಲೂ ಸದ್ದು

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.9- ಭಾರತೀಯ ಪುರಾತನ ಆಯುರ್ವೇದ ಔಷಧಿ ಅಮೆರಿಕದಲ್ಲೂ ಸದ್ದು ಮಾಡಿದೆ. ಕೊರೊನಾ ವೈರಸ್‍ಗೆ ಆಯುರ್ವೇದ ಔಷಧಿ ಕಂಡುಹಿಡಿಯುವ ಜಂಟಿ ಕಾರ್ಯದಲ್ಲಿ ಭಾರತೀಯ ಆಯುರ್ವೇದ ಸಂಶೋಧಕರು ಹಾಗೂ ಅಮೆರಿಕದ ವೈದ್ಯರು ತೊಡಗಿಸಿಕೊಂಡಿದ್ದಾರೆ.

ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಣ್‍ಜಿತ್‍ಸಿಂಗ್ ಸಂದು ಅವರು ಭಾರತ ಮತ್ತು ಅಮೆರಿಕದ ಪ್ರಖ್ಯಾತ ವೈದ್ಯ ಸಂಶೋಧಕರು, ವಿಜ್ಞಾನಿಗಳು, ಪರಿಣಿತರು ಕೊರೊನಾ ವೈರಸ್‍ಗೆ ಆಯುರ್ವೇದ ಮದ್ದು ಕಂಡುಹಿಡಿಯುವ ಬಗ್ಗೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇಡೀ ವಿಶ್ವವನ್ನೇ ಕಾಡುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಕೈ ಜೋಡಿಸಿದ್ದು, ಉಭಯ ದೇಶಗಳ ವೈದ್ಯಕೀಯ ವಿಧಾನಗಳನ್ನು ಸಮೀಕರಣಗೊಳಿಸಿ ಮಹಾಮಾರಿಗೆ ಮದ್ದು ಕಂಡುಹಿಡಿಯಲು ಮುಂದಾಗಿದ್ದಾರೆ.

ಈ ಜಂಟಿ ಸಂಶೋಧನೆಯಲ್ಲಿ ಭಾರತೀಯ ಪುರಾತನ ವೈದ್ಯಕೀಯ ಪದ್ಧತಿಯಾದ ಆಯುರ್ವೇದವನ್ನು ಪ್ರೋತ್ಸಾಹಿಸುವ ಕಾರ್ಯದ ಜತೆಗೆ ಕೊರೊನಾ ರೋಗಕ್ಕೆ ಮದ್ದು ಕಂಡುಹಿಡಿಯುವ ಜಂಟಿ ಕ್ಲಿನಿಕಲ್ ಟ್ರಯಲ್ಸ್‍ಗೆ ಉಭಯ ದೇಶಗಳ ಖ್ಯಾತನಾಮರು ತೊಡಗಿಸಿಕೊಂಡಿದ್ದಾರೆ.

Facebook Comments