ಜಮ್ಮು-ಕಾಶ್ಮೀರ ಗಡಿಯಲ್ಲಿ ಒಳನುಸುಳುವ ಉಗ್ರರಿಗೆ ಅಮೆರಿಕ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಗ್ಟಂನ್, ಮಾ.5 (ಪಿಟಿಐ)- ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಾದ್ಯಂತ ಒಳನುಸುಳಲು ಪ್ರಯತ್ನಿಸುವ ಭಯೋತ್ಪಾಕರಿಗೆ ಎಚ್ಚರಿಕೆ ನೀಡಿದ್ದಲ್ಲದೆ ಇಂತಹ ಕೃತ್ಯಕ್ಕೆ ಸಹಕಾರ ನೀಡುವ ರಾಷ್ಟ್ರಗಳು 2003ರ ಕದನ ವಿರಾಮ ಬದ್ಧತೆಗಳಿಗೆ ಮರಳಬೇಕು ಎಂದು ಸೂಚಿಸಿದೆ.

ಆ ಮೂಲಕ ಎಲ್‍ಒಸಿ ಉದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಎಲ್ಲ ಪಕ್ಷಗಳಿಗೆ ಕರೆ ನೀಡಿದೆ. ನಾವು ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳನ್ನು ಬಹಳ ನಿಕಟವಾಗಿ ಅನುಸರಿಸುತ್ತಿದ್ದೇವೆ. ಈ ಪ್ರದೇಶದ ಬಗೆಗಿನ ನಮ್ಮ ನೀತಿ ಬದಲಾಗಿಲ್ಲ.

ಕದನ ವಿರಾಮ ಬದ್ಧತೆಗಳನ್ನು ಅನುಸರಿಸುವ ಮೂಲಕ ನಿಯಂತ್ರಣ ರೇಖೆಯ ಉದ್ದಕ್ಕೂ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ಸಾರ್ವಜನಿಕರ ನೆಮ್ಮದಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುವುದು ನಾವು ಸಹಿಸಲ್ಲ.

ನಿಯಂತ್ರಣ ರೇಖೆ ಉದ್ದಕ್ಕೂ ಉದ್ವಿಗ್ನತೆ ಕಡಿಮೆ ಮಾಡುವತ್ತ ನಾವು ಎಲ್ಲ ಪಕ್ಷಗಳಿಗೆ ಕರೆ ನೀಡುತ್ತೇವೆ ಎಂದು ರಾಜ್ಯ ಇಲಾಖೆ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಿಯಂತ್ರಣ ರೇಖೆಯಾದ್ಯಂತ ಒಳನುಸುಳಲು ಪ್ರಯತ್ನಿಸುವ ಭಯೋತ್ಪಾದಕರನ್ನು ಹತ್ತಿಕ್ಕುವ ಕೆಲಸ ಆಗಬೇಕಿದೆ. ಈ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ.

ಉಗ್ರರ ವಿಷಯ ಬಂದಾಗ ಹತ್ತಿಕ್ಕುವ ಕೆಲಸವನ್ನು ಸ್ವಾಗತಿಸುತ್ತೇವೆ. ನಾವು ಕಾಶ್ಮೀರ ಮತ್ತು ಇತರ ಕಾಳಜಿಯ ಕ್ಷೇತ್ರಗಳ ಬಗ್ಗೆ ಭಾರತ ಮತ್ತು ಪಾಕಿಸ್ತಾನ ನಡುವೆ ನೇರ ಸಂವಾದವನ್ನು ಬೆಂಬಲಿಸುತ್ತಲೇ ಇದ್ದೇವೆ ಎಂದರು.

Facebook Comments

Sri Raghav

Admin