ಕಿಲ್ಲರ್ ಕೊರೋನಾಗೆ ವಿಶ್ವವ್ಯಾಪಿ 14,000 ಬಲಿ, ಸೋಂಕಿತರ ಸಂಖ್ಯೆ 3.18 ಲಕ್ಷಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.23- ಜಗತ್ತಿನಾದ್ಯಂತ ಸಾವಿನ ದಲ್ಲಾಳಿಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟುತೀವ್ರಗೊಂಡಿದ್ದು, ವಿಶ್ವದಲ್ಲಿಈವರೆಗೆಸುಮಾರು 14,000 ಮಂದಿ ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಅಲ್ಲದೇ ಸೋಂಕು ಪೀಡಿತರ ಸಂಖ್ಯೆ 3.18 ಲಕ್ಷಕ್ಕೇರಿದೆ.

ಕೊರೊನಾ ಬಾಧೆಯಿಂದ ತತ್ತರಿಸಿರುವ ಇಟಲಿಯಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಮತ್ತೆ 651 ಮಂದಿ ಬಲಿಯಾಗಿದ್ಧಾರೆ. ಪ್ರಕರಣಗಳು ವರದಿಯಾಗಿವೆ ಸಾವಿನ ಮನೆಯಂತಾಗಿರುವಇಟಲಿಯಲ್ಲಿ ಈಗಾಗಲೇ ಸತ್ತವರ ಸಂಖ್ಯೆ5,478ಕ್ಕೇರಿದೆ. ಲ್ಲದೇಸುಮಾರು 40,000 ಮಂದಿಗೆ ಸೋಂಕು ತಗುಲಿದ್ದು, ಕಳವಳಕಾರಿಯಾಗಿದೆ.

ಅಮೆರಿಕ ಮತ್ತು ಸ್ಪೇನ್‍ನಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರಿದಿದೆ. ಅಮೆರಿಕದಲ್ಲಿಕೊರೊನಾ ಸಾವಿನ ಸಂಖ್ಯೆ 400ಕ್ಕೇರಿದ್ದು, ದೇಶದಎಲ್ಲ 50 ರಾಜ್ಯಗಳಿಗೂ ವ್ಯಾಪಿಸಿದ್ದು. ಈ ಪ್ರಾಂತ್ಯಗಳಲ್ಲಿ ಸುಮಾರುಮತ್ತೆ ಸುಮಾರು 8,400 ಪ್ರಕರಣಗಳು ಪತ್ತೆಯಾಗುತ್ತಿವೆ. ಇರಾನ್ ಮತ್ತು ಸ್ಪೇನ್‍ನಲ್ಲೂ ಈ ಹೆಮ್ಮಾರಿಯಅಟ್ಟಹಾಸಕ್ಕೆಮತ್ತೆ ಸಾವು ನೋವು ಮರುಕಳಿಸಿವೆ.

ಕೋವಿಡ್-19 ಜಗತ್ತಿನ 185 ದೇಶಗಳಲ್ಲಿ ತನ್ನಕಬಂಧ ಬಾಹುಗಳನ್ನು ವ್ಯಾಪಿಸಿದ್ದು ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ಒಟ್ಟಾರೆ ಈ ಮಹಾಮಾರಿ ವಿರುದ್ಧಇಡೀ ವಿಶ್ವವೇ ಹೋರಾಡುವಂತಾಗಿದೆ. ಪಾಕಿಸ್ತಾನದಲ್ಲಿ ಕೋವಿಡ್-19 ಸೋಂಕಿಗೆ ಮೂವರು ಮೃತಪಟ್ಟು, 350ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾರಣಿಸಿಕೊಂಡಿದೆ.

ಜಗತ್ತಿನ 160ಕ್ಕೂ ಹೆಚ್ಚು ದೇಶಗಳಲ್ಲಿ ಈ ಹೊಸ ವೈರಾಣು ಸೋಂಕಿನಿಂದ ಲಕ್ಷಾಂತರ ಮಂದಿ ಬಾಧಿತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆಎಂದು ವಿಶ್ವಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಆತಂಕ ವ್ಯಕ್ತಪಡಿಸಿದೆ.

Facebook Comments

Sri Raghav

Admin