ಅಮೆರಿಕದಲ್ಲಿ ಅಗೋಚರ ವೈರಿಗೆ ಕೊರೋನಾಗೆ 61,000 ಜನ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.30- ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ಅಮೆರಿಕದಲ್ಲಿ 61,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 13 ಲಕ್ಷ ದಾಟಿದ್ದು, ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಇಡೀ ವಿಶ್ವದಲ್ಲೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಮತ್ತು ನುರಿತ ವೈದ್ಯರ ಸಮೂಹವನ್ನೇ ಹೊಂದಿರುವ ಅಮೆರಿಕ ಅಗೋಚರ ವೈರಿಯನ್ನು ನಿಗ್ರಹಿಸುವಲ್ಲಿ ವಿಫಲವಾಗಿದ್ದು, ಪ್ರತಿದಿನ ಸರಾಸರಿ 1,800 ಮಂದಿ ಅಲ್ಲಿ ಸಾವಿಗೀಡಾಗುತ್ತಿದ್ದಾರೆ.

ಜÁನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿ ಮಾಹಿತಿ ಪ್ರಕಾರ ನಿನ್ನೆ ಒಂದೇ ದಿನ ಅಮೆರಿಕದಲ್ಲಿ 2,502 ಮಂದಿ ಮೃತಪಟ್ಟಿದ್ದು, ನಿನ್ನೆ ರಾತ್ರಿವರೆಗೆ 60,853 ಮಂದಿಯನ್ನು ಕೋವಿಡ್-19 ವೈರಸ್ ನುಂಗಿ ಹಾಕಿದೆ.

ವಿಶ್ವದಲ್ಲೇ ಕೋವಿಡ್-19 ವೈರಾಣು ದಾಳಿಗೆ ಅತಿಹೆಚ್ಚು ರೋಗಿಗಳು ಬಲಿಯಾದ ಮತ್ತು ಸೋಂಕು ಬಾಧಿತ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಪಾತ್ರವಾಗಿದೆ. ಇಂದು ಮತ್ತೆ ಅಮೆರಿಕದ ವಿವಿಧ ರಾಜ್ಯಗಳು ಮತ್ತು ಪ್ರಮುಖ ನಗರಗಳಲ್ಲಿ ಕೊರೊನಾ ಸಾವು ಮತ್ತು ಸೋಂಕು ಪ್ರಕರಣಗಳ ಸರಣಿ ಯಥಾಪ್ರಕಾರ ಮುಂದುವರಿದಿದೆ.

ಅಮೆರಿಕದಲ್ಲಿ ಸುಮಾರು 96,000 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಿಲ್ಲರ್ ವೈರಸ್ ಕೇಂದ್ರ ಬಿಂದು ಎನಿಸಿರುವ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ ಸುಮಾರು 23,000ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವೈರಸ್ ಬಲಿಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 3.60 ಲಕ್ಷ ದಾಟಿದೆ.

ಅಮೆರಿಕದ ಪ್ರಮುಖ ಕಾರಾಗೃಹಗಳಲ್ಲಿ ಪರೀಕ್ಷೆಗೆ ಒಳಪಡಿಸಲಾದ ಸೆರೆಯಾಳುಗಳಲ್ಲಿ ಶೇ.70ರಷ್ಟು ಕೈದಿಗಳಿಗೆ ಸೋಂಕು ದೃಢಪಟ್ಟಿರುವುದು ಆತಂಕಕಾರಿಯಾಗಿದೆ.

Facebook Comments

Sri Raghav

Admin