ಮುಂಬೈ ದಾಳಿಯ ಸಂಚುಕೋರ ರಾಣಾ ಜಾಮೀನು ಅರ್ಜಿ ವಜಾಗೊಳಿಸಿದ ಅಮೆರಿಕ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜು.25- ವಾಣಿಜ್ಯ ರಾಜಧಾನಿ ಮುಂಬೈ ಮೇಲೆ 2008ರಲ್ಲಿ ನಡೆದ ಭಯೋತ್ಪಾದಕರ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಕೆನಡಾ ಉದ್ಯಮಿ ಮತ್ತು ಉಗ್ರಗಾಮಿ ತಹವೋರ್ ರಾಣಾ ಜಾಮೀನು ಅರ್ಜಿಯನ್ನು ಅಮೆರಿಕದ ನ್ಯಾಯಾಲಯವೊಂದು ವಜಾಗೊಳಿಸಿದೆ.

ಅಮೆರಿಕ ಪೆÇಲೀಸರು ವಶದಲ್ಲಿರುವ ರಾಣಾ ತನಗೆ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಾಷಿಂಗ್ಟನ್‍ನ ನ್ಯಾಯಾಲಯವೊಂದು ತಿರಸ್ಕರಿಸಿತು.

ಈ ಮೂಲಕ ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂಬ ಭಾರತದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ರಾಣಾನಿಗೆ ಒಂದುವೇಳೆ ಜಾಮೀನು ನೀಡಿದ್ದೇ ಆಗಿದ್ದರೆ ಆತ ಪರಾರಿಯಾಗುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ನ್ಯಾಯಾಧೀಶರು, ಮುಂಬೈ ದಾಳಿ ಸಂಚುಕೋರನ ಅರ್ಜಿಯನ್ನು ವಜಾಗೊಳಿಸಿತು.

ರಾಣಾನಿಗೆ ಜಾಮೀನು ನೀಡಲು ಯಾವುದೇ ಕಾರಣಗಳಿಲ್ಲ. ಹಾಗೇನಾದರೂ ಆತನಿಗೆ ಬೇಲ್ ನೀಡಿದರೆ ಆತ ತಪ್ಪಿಸಿಕೊಂಡು ಕೆನಡಾಕ್ಕೆ ಪರಾರಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಆತನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋಟ್ ಸ್ಪಷ್ಟಪಡಿಸಿದೆ.

Facebook Comments

Sri Raghav

Admin