2+2 ಮಾತುಕತೆ ವೇಳೆ ಭಾರತದ ಕ್ಷಿಪಣಿ ಖರೀದಿ ಪ್ರಧಾನ ವಿಷಯವಾಗದು : ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

indo-america

ವಾಷಿಂಗ್ಟನ್, ಸೆ.5 (ಪಿಟಿಐ)-ಭಾರತ ಮತ್ತು ಅಮೆರಿಕ ನಡುವೆ ನಡೆಯಲಿರುವ 2+2 ಮಾತುಕತೆ ವೇಳೆ ರಷ್ಯಾದಿಂದ ನವದೆಹಲಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ಇರಾನ್‍ನಿಂದ ತೈಲ ಖರೀದಿ ವಿಷಯಗಳು ಚರ್ಚೆಗೆ ಬರಲಿವೆ ಯಾದರೂ, ಅವು ಚರ್ಚೆಯ ಪ್ರಧಾನ ವಿಷಯ ವಾಗದು ಎಂದು ವಾಷಿಂಗ್ಟನ್ ಸ್ಟಷ್ಟಪಡಿಸಿದೆ.  ದೆಹಲಿಯಲ್ಲಿ ರಕ್ಷಣಾ ಸಚಿವೆ ಸುಷ್ಮಾ ಸ್ವರಾಜ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಅಮೆರಿಕದ ಸಹವರ್ತಿಗಳಾದ ಜಿಮ್ ಮಟ್ಟಿಸ್ ಹಾಗೂ ಮೈಕ್ ಪೊಂಪಿಯೋ ನಡುವೆ 2+2 ಮಾತುಕತೆಗೆ ವೇದಿಕೆ ಸಜ್ಞಾಗಿದೆ. ನಾಳೆ ಮಟ್ಟಿಸ್ ಮತ್ತು ಪೊಂಪಿಯೋ ಸಂವಾದ ನಡೆಸಲು ಭಾರತಕ್ಕೆ ಆಗಮಿಸಲಿದ್ದಾರೆ.

ಇದಕ್ಕೆ ಪೂರ್ವವಾಗಿ ಮಾತುಕತೆ ಕುರಿತು ಹೇಳಿಕೆ ನೀಡಿದ ಪೊಂಪಿಯೊ ಭಾರತವು ರಷ್ಯಾದಿಂದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ಇರಾನ್‍ನಿಂದ ತೈಲ ಖರೀದಿ ವಿಷಯಗಳು ಚರ್ಚೆಗೆ ಬರಲಿವೆ. ಆದರೆ ಅವು ಚರ್ಚೆಯ ಪ್ರಾಥಮಿಕ ಪ್ರಧಾನ ವಿಷಯವಾಗದು ಎಂದು ಹೇಳಿದ್ದಾರೆ.  ಎರಡು ದೇಶಗಳ ನಡುವೆ ಉದ್ಘಾಟನಾ 2+2 ಮಾತುಕತೆ ವೇಳೆ ಅಮೆರಿಕ ಮತ್ತು ಭಾರತದ ರಕ್ಷಣಾ ಮತ್ತು ವಿದೇಶಾಂಗ ಸಂಬಂಧಗಳ ಬಲವರ್ಧನೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Facebook Comments

Sri Raghav

Admin