23 ಗ್ರಾನ್ ಸ್ಲಾಮ್ ಗದ್ದಿದ್ದ ಸೆರಿನಾಳನ್ನು ಮಣಿಸಿ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಬಿಯಾಂಕಾ.!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಸೆ.8- ಯುಎಸ್ ಓಪನ್ ಟೆನಿಸ್ ಟೂರ್ನಿಯ ರೋಚಕ ಫೈನಲ್‍ನಲ್ಲಿ 23 ಗ್ರಾನ್ ಸ್ಲಾಮ್ ವಿಜೇತೆ ಅಮೆರಿಕದ ಪ್ರಬಲ ಆಟಗಾರ್ತಿ ಸೆರೆನಾ ವಿಲಿಯಮ್ಸ್‍ಗೆ ಭಾರೀ ಮುಖಭಂಗವಾಗಿದೆ. 19 ವರ್ಷದ ಉದಯೋನ್ಮುಖ ಆಟಗಾರ್ತಿ ಕೆನಡಾದ ಬಿಯಾಂಕಾ ಆಂಡ್ರೀಸ್ಕು ಬ್ಲಾಕ್ ಪಾಂಥರ್‍ಗೆ ಆಘಾತ ನೀಡಿದ್ದು , ಚೊಚ್ಚಲ ಮತ್ತು ಐತಿಹಾಸಿಕ ಅಮೆರಿಕ ಓಪನ್ ಪ್ರಶಸ್ತಿ ಮುಡಿಗೇರಿಸಿದ್ದಾರೆ.

ಇಲ್ಲಿನ ಮಾರ್ಗರೇಟ್ ಕೋರ್ಟ್‍ನಲ್ಲಿ ನಡೆದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ವಿನ್ನರ್ ಬಿಯಾಂಕಾ ಆಂಡ್ರೀಸ್ಕು 23 ಗ್ರಾಂಡ್ ಸ್ಲಾಮ್ ವಿನ್ನರ್ ಸೆರೆನಾ ವಿಲಿಯಮ್ಸ ಅವರನ್ನು 6-3, 7-5 ನೇರ ಸೆಟ್‍ಗಳಿಂದ ಮಣಿಸಿ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.

ಆರಂಭದಿಂದಲೂ ತಮ್ಮ ಆಕ್ರಮಣಕಾರಿ ಆಟದಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಬಿಯಾಂಕಾ ಆಂಡ್ರೀಸ್ಕು ಮೊದಲ ಸೆಟ್ ಅನ್ನು 6-3ರಲ್ಲಿ ತಮ್ಮದಾಗಿಸಿಕೊಂಡರು. 2ನೇ ಸೆಟ್‍ನಲ್ಲೂ ಅದೇ ರೀತಿಯ ಪ್ರದರ್ಶನ ನೀಡಿದ ಬಿಯಾಂಕಾ ಆಂಡ್ರೀಸ್ಕುಗೆ ಸೆರೆನಾ ಬಲವಾದ ಪ್ರತಿರೋಧ ತೋರಿದರು. ಆದರೆ ಅವರು ಐದು ಸೆಟ್ ಗಳನ್ನು ಮಾತ್ರ ತಮ್ಮದಾಗಿಸಿಕೊಂಡರೆ ಬಿಯಾಂಕಾ ಆಂಡ್ರೀಸ್ಕು 7 ಸೆಟ್‍ಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಫೈನಲ್ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.

ಸೆರಿನಾ ವಿಷಾದ: ಯುಎಸ್ ಫೈನಲ್‍ನಲ್ಲಿ ಆಘಾತಕಾರಿ ಸೋಲಿನಿಂದ ನಿರಾಶರಾಗಿರುವ ಸೆರಿನಾ ಈ ಪರಾಭವವನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ವಿಷಾದಿಸಿದ್ದಾರೆ. ಬ್ರಿಯಾಂಕಾ ಅತ್ಯುತ್ತಮ ಆಟ ಪ್ರದರ್ಶಿಸಲು ನಾನು ಆಕ್ರಮಣಕಾರಿ ನಡೆ ಮೂಲಕ ಪ್ರತ್ಯುತ್ತರ ನೀಡಲು ಯತ್ನಿಸಿದ್ದರಾದರೂ ಎದುರಾಳಿ ಸಾಮಥ್ರ್ಯ ಜೋರಾಗಿದ್ದು , ಆಕೆಯ ಬಲವಾದ ಸರ್ವೀಸ್ ಹೊಡೆತಗಳನ್ನು ಎದುರಿಸಲು ನಾನು ಕಷ್ಟಪಟ್ಟಿದ್ದು ನಿಜ ಎಂದು ತಮ್ಮ ರೋಚಕ ಸೋಲನ್ನು ಒಪ್ಪಿಕೊಂಡಿದ್ದಾರೆ.

Facebook Comments

Sri Raghav

Admin