ಕೆನಡಾದ ಎಮ್ಮಾಗೆ ಯುಎಸ್ ಓಪನ್ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.12- ಇಂದಿಲ್ಲಿ ನಡೆದ ಯುಎಸ್ ಓಪನ್‍ನ ಫೈನಲ್ ಪಂದ್ಯದಲ್ಲಿ ಕೆನಡಾದ ಎಮ್ಮಾ ರಡುಕಾನು ಅವರು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಚೊಚ್ಚಲ ಅಮೆರಿಕಾ ಓಪನ್ ಫೈನಲ್‍ನಲ್ಲಿ ಪಾಲ್ಗೊಂಡಿದ್ದೇ ನನಗೆ ತುಂಬಾ ಸಂತಸವಾಗಿತ್ತು, ಅದರಲ್ಲೂ ಪ್ರಶಸ್ತಿ ಗೆದ್ದಿರುವುದು ಆ ಸಂತೋಷವನ್ನು ದುಪ್ಪಟ್ಟು ಮಾಡಿರುವುದೇ ಅಲ್ಲದೆ ನನ್ನ ಮುಂದಿನ ಟೆನ್ನಿಸ್ ಜೀವನಕ್ಕೆ ಮುನ್ನುಡಿ ಬರೆದಿದೆ ಎಂದು ಎಮ್ಮಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ

ಎಮ್ಮಾ ಅವರು ಕಳೆದ 10 ಪಂದ್ಯಗಳಿಂದಲೂ ಅದ್ಭುತ ಪ್ರದರ್ಶನ ತೋರುತ್ತಿದ್ದು, 7 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ 2014ರಲ್ಲಿ ಟೆನ್ನಿಸ್ ಲೋಕದ ದಿಗ್ಗಜೆ ಮರಿನಾ ಶರಪೋವಾ ಅವರು ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಇಂದಿಲ್ಲಿ ನಡೆದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಬ್ರಿಟಿಷ್ ಆಟಗಾರ್ತಿ ಎಮ್ಮಾ ರಡುಕಾನು ಅವರು ಕೆನಡಾದವರೇ ಆದ ಲೇಲಾ ಫರ್ನಾಂಡೀಸ್‍ರ ವಿರುದ್ಧ 6-4, 6-3 ನೇರ ಸೆಟ್‍ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದರು.

19 ವರ್ಷ ಎಮ್ಮಾ ಅತಿ ಕಿರಿಯ ವಯಸ್ಸಿನಲ್ಲಿ ಯುಎಸ್ ಓಪನ್ ಗೆದ್ದ ಆಟಗಾರ್ತಿ ಎಂಬ ಕೀರ್ತಿಗೂ ಭಾಜನರಾಗಿ ದ್ದಾರೆ. ಈ ಹಿಂದೆ ಟೆನ್ನಿಸ್ ಲೋಕದ ಸಾಮ್ರಾಜ್ಞೆ ಶರಪೋವಾ ಅವರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿತ್ತು.

Facebook Comments