ಟೆನ್ನಿಸ್ ದಿಗ್ಗಜ ಜೊಕೊವಿಚ್ ಮಣಿಸಿ ಚೊಚ್ಚಲ ಗ್ರ್ಯಾಂಡ್‍ಸ್ಲಾಮ್ ಗೆದ್ದ ಮೆಡ್ವೆಡೆವ್

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ. 13- ಟೆನ್ನಿಸ್ ಲೋಕದ ದಿಗ್ಗಜ , 20 ಬಾರಿ ಗ್ರ್ಯಾಂಡ್‍ಸ್ಲಾಮ್ ಗೆದ್ದಿರುವ ಸೆರೆಬಿಯಾದ ನೊವಾಕ್ ಜೊಕೊವಿಚ್‍ರನ್ನು ಮಣಿಸುವ ಮೂಲಕ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಅವರು ಯುಎಸ್ ಓಪನ್À ಗೆದ್ದು ತಮ್ಮದಾಗಿಸಿಕೊಂಡಿದ್ದಾರೆ. ಇಂದಿಲ್ಲಿ ನಡೆದ ಯುಎಸ್ ಓಪನ್ ಫೈನಲ್‍ನಲ್ಲಿ ಗೆಲ್ಲುವ ಮೂಲಕ 1969ರ ನಂತರ ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಗ್ರ್ಯಾಂಡ್‍ಸ್ಲ್ಯಾಮ್ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಹೊತ್ತಿದ್ದ ನೊವಾಕ್‍ರ ಕನಸು ಭಗ್ನವಾಗಿದೆ.

ಪುರುಷರ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 2ರ ಶ್ರೇಯಾಂಕಿತ ಆಟಗಾರ ಮಡ್ವೆಡೆವ್ ಅವರು ಆರಂಭಿಕ ಸುತ್ತಿನಿಂದಲೂ ಟೆನ್ನಿಸ್ ಲೋಕದ ನಂಬರ್ 1 ಆಟಗಾರ ನೊವಾಕ್ ಸವಾಲನ್ನು ಎದುರಿಸಲು ಮೊದಲ ಸುತ್ತಿನಲ್ಲೂ ಉತ್ತಮ ಹೋರಾಟ ಪ್ರದರ್ಶಿಸಿ 6-4, 6-4, 6-4 ನೇರ ಸೆಟ್‍ಗಳ ಮೂಲಕ ಗೆಲ್ಲುವ ಮೂಲಕ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಮುಕುಟವನ್ನು ಅಲಂಕರಿಸಿದ್ದಾರೆ. ಕಳೆದ ಆಸ್ಟ್ರೇಲಿಯಾ ಓಪನ್‍ನಲ್ಲಿ ಮೆಡ್ವೆಡಿವ್‍ರನ್ನು ಸೋಲಿಸಿ ಚಾಂಪಿಯನ್ ಆಗಿದ್ದ ನೊವಾಕ್ ಅವರು ನಂತರ ಫ್ರೆಂಚ್ ಓಪನ್, ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದ್ದರಾದರೂ ಟೊಕಿಯೊ ಒಲಿಂಪಿಕ್ಸ್‍ನಲ್ಲಿ 4ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ತಮ್ಮ ಟೆನ್ನಿಸ್ ಲೋಕದಲ್ಲಿ ಇದುವರೆಗೂ 21 ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿರುವ ನೋವಾಕ್ ಜೊಕೊವಿಚ್ ಯುಎಸ್ ಓಪನ್ ಗೆಲ್ಲುವ ಮೂಲಕ 22 ಗ್ರ್ಯಾಂಡ್‍ಸ್ಲ್ಯಾಮ್ ಗೆಲ್ಲುವ ಮೂಲಕ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಫಲ್ ನಡಾಲ್ ನಿರ್ಮಿಸಿರುವ ದಾಖಲೆ ಅಳಿಸುವ ಕಾತರದಿಂದ ಇದ್ದರಾದರೂ ಅವರ ಕನಸಿಗೆ ಮೆಡ್ವೆಡೆವ್ ಬ್ರೇಕ್ ಹಾಕಿದ್ದಾರೆ.

Facebook Comments